Koppal

ಕಾರ್ಮಿಕರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಬೇಟಿ


ಕುಷ್ಟಗಿ:ಸೆಕ್ಯೂರಿಟಿ ಗಾರ್ಡ್ ತಾಂತ್ರಿಕ ಹಾಗೂ ಕಾರ್ಮಿಕ ವರ್ಗದ ಒಟ್ಟು ಜನ ಕಳೆದ ನಾಲ್ಕು ವರ್ಷಗಳಿಂದಲೂ ತಮ್ಮನ್ನು ವಂಚಿಸುತ್ತಿರುವ ಕಂಪನಿಗಳ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಆದರೆ, ಕಂಪನಿಗಳು ಮಾತ್ರ ಕಾರ್ಮಿಕರ ಮೂಗಿಗೆ ತುಪ್ಪ ಸವರುತ್ತಾ, ಭರವಸೆಗಳ ಬಿಸಿಲ್ಗುದುರೆ ತೋರಿಸುತ್ತಾ ದುಡಿಸಿಕೊಳ್ಳುತ್ತಿವೆ. ಎರಡೂ ಕಂಪನಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಎರಡನೇಯ ದಿನದಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.ನಂತರ ಸಂಬಂಧಿಸಿದ ರೇಸ್ ಪಾವರ್ ಇನ್ಫ್ರಾ ಪ್ರವೇಟ್ ಲಿಮಿಟೆಡ್ ಹಾಗೂ ಪಯನೀಯರ್ ಸೆಕ್ಯುರಿಟಿ ಎಜೆನ್ಸಿಯವರ ಜೊತೆ ಮಾತುಕತೆ ನಡೆಸಿ ಉಭಯ ಕಂಪನಿಯ ವರಿಗೆ ನೋಟೀಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಗತಿ ಪರ ರೈತರು ಹಾಗೂ ಮುಖಂಡ ಅಶೋಕ ಬಳೂಟಗಿ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಸಾಕಷ್ಟು ಹೊರ ರಾಜ್ಯ ಮತ್ತು ಬೇರೆ ದೇಶಗಳ ಕಂಪನಿಗಳು ಬಂದಿವೆ.ಈ ಭಾಗದ ಕಾರ್ಮಿಕರ ಕುಟುಂಬಕ್ಕೆ ಅನುಕೂಲ ವಾಗುವ ರೀತಿ ಹಾಗೂ ಕಾರ್ಮಿಕ ಇಲಾಖೆಯ ನಿಯಮದಂತೆ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕಂಪನಿಗಳು ಸಹಕರಿಸಬೇಕು ಎಂದರು.

ನಂತರ ರೇಸ್ ಪಾವರ್ ಕಂಪನಿಯ ಕುಷ್ಟಗಿ ಸೈಟಿನ ಪ್ರಾಜೆಕ್ಟ್ ಮ್ಯಾನೇಜರ್ ದಿನೇಶ ಮಾತನಾಡಿ ಲೇಬರ್ ಹಾಗೂ ತಾಂತ್ರಿಕ ಸಿಬ್ಬಂದಿ ಯ ಕೆಲವು ಬೇಡಿಕೆಗಳನ್ನು ಮುಂದಿನ 10 ದಿನಗಳಲ್ಲಿ ಬಗೆಹರಿಸಿ ಕೊಡುವುದಾಗಿ ರೇಸ್ ಪಾವರ್ ಇನ್ಫ್ರಾ ಪ್ರವೇಟ್ ಲಿಮಿಟೆಡ್ ಕಂಪನಿ ನನಗೆ‌ ನೀಡಿದ ಭರವಸೆ ಹಿನ್ನಲೆಯ ಲ್ಲಿ ಲಿಖಿತ ರೂಪದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ರಿಗೆ ನೀಡಿದರು.

ಪಯನೀಯರ್ ಸೆಕ್ಯುರಿಟಿ ಎಜೆನ್ಸಿಯವರ ಪರವಾಗಿ ದಾಮೋದರ ಮಾತನಾಡಿ ಈಗಾಗಲೇ ಇವರ ಬೇಡಿಕೆಗಳ ಬಗ್ಗೆ ಕಂಪನಿಯ ಗಮನಕ್ಕೆ ತಂದಿದ್ದು ಸಕಾರಾತ್ಮಕ ಉತ್ತರ ಸಿಗಲಿದೆ ಎಂದರು.

ದಿನಾಂಕ 27-12-2021ರ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.

ಆರ್  ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply