Belagavi

ಕಮಲ ಕೋಟೆಯಲ್ಲಿ ಕೈ ವಿಜಯೋತ್ಸವ ಮತ್ತೊಮ್ಮೆ ಬಿಜೆಪಿಗೆ ಮುಖಭಂಗ


ಅಥಣಿ : ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸಿದ್ದು ಬಿಜೆಪಿಯು ಹೀನಾಯ ಸೋಲು ಅನುಭವಿಸಿದೆ.

ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ್ ಸವದಿ ಮತ್ತು ಶಾಸಕ ಮಹೇಶ ಕುಮಠಳ್ಳಿ ಪ್ರತಿನಿಧಿಸುವ ಪುರಸಭೆಯಲ್ಲಿಯೇ ಬಿಜೆಪಿ ಮಣ್ಣುಮುಕ್ಕಿದ್ದು ಹೀನಾಯ ಸೋಲು ಅನುಭವಿಸಿದೆ.

ಅಥಣಿ ಪುರಸಭೆಯಲ್ಲಿ ಒಟ್ಟು 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ 15 ಅಭ್ಯರ್ಥಿಗಳು, ಬಿಜೆಪಿಯ 09 ಹಾಗೂ ಪಕ್ಷೇತರಾಗಿ 3 ಜನ ಆಯ್ಕೆಯಾಗಿದ್ದು. ಕಾಂಗ್ರೆಸ್ ಹೊಡೆತಕ್ಕೆ ಬಿಜೆಪಿ ಬಾರಿ ಅಂತರದ ಸೋಲು ಕಂಡಂತಾಗಿದೆ.


Leave a Reply