Koppal

ಸಂಗೀತಕ್ಕೆ ಆರೋಗ್ಯವಂತರನ್ನಾಗಿಸುವ ಶಕ್ತಿ ಇದೆ: ಜಿ.ಕೆ.ಹಿರೇಮಠ


ಕುಷ್ಟಗಿ:-ಡಿ.30     ಸಂಗೀತವೆಂದರೆ ಅಗಾಧವಾದಂತಹ ಶಕ್ತಿಯನ್ನು ಹೊಂದಿದ್ದು ಸಕಲ ಜೀವಿಗಳ ಮೈಮರೆಸುವ ಶಕ್ತಿ ಇದೆ.
ಸಂಗೀತದಿಂದ ನಮ್ಮೆಲ್ಲರ ಮಾನಸಿಕ ಕಾಯಿಲೆಗಳು
ಗುಣವಾಗುವುದರ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ ಎಂದು ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ ಹೇಳಿದರು.

ಅವರು ಕುಷ್ಟಗಿಯ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಹಾಗೂ ಜ್ಯೋತಿ ಮಹಿಳಾ ಮಂಡಳ ಇವರ
ಸಹಯೋಗದಲ್ಲಿ ನಡೆದ ಸಾಮಾನ್ಯ ಯೋಜನೆಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು
ದೋಲಕ್ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಂಗೀತಕ್ಕೆ ಸೋಲದ ಮನಸ್ಸುಗಳೇ ಇಲ್ಲ. ಹಾಗೆಯೇ ಜನಪದ ಕಲೆಯು ನಮ್ಮ ನೆಲ-ಮೂಲ ಸಂಸ್ಕೃತಿಯಾಗಿದೆ. ಜನಪದ ಸಾಹಿತ್ಯದಲ್ಲಿ ನಮ್ಮ ಬದಕನ್ನು ಸರಿ ದಾರಿಗೆ ತರುವ ಉಪದೇಶವಿದೆ, ಮಾರ್ಗದರ್ಶನವಿದೆ. ಕಾರಣ ಜನಪದ ಕಲಾಪರಂಪರೆಯನ್ನು ಉಳಿಸಿ,
ಬೆಳೆಸಿಕೊಂಡು ಹೋಗುವ ಜವಾಬ್ದಾರಿಯು ಇಂದಿನ ಯುವ ಪೀಳಿಗೆಯ ಮೇಲಿದೆ.
ನಾವೆಲ್ಲರೂ ಕನ್ನಡದ ಮೂಲ ಜನಪದ ಕಲಿ ಕಲಾವಿದರನ್ನು ಉಳಿಸಿ-ಬೆಳಸಿ
ಪ್ರೋತ್ಸಾಯಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನಮವ್ವ ಕೋರಿ ಉಪಾಧ್ಯಕ್ಷರು ಪುರಸಭೆ,ಕುಷ್ಟಗಿ ಇವರು
ವಹಿಸಿದ್ದರು. ಅತಿಥಿಗಳಾಗಿ ಮೋಹನಲಾಲ್ ಜೈನ್, ಎಸ್.ಎಸ್. ಹಿರೇಮಠ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹನಮಂತಪ್ಪ ಹಳ್ಳಿ, ಮಹಾಂತೇಶ, ಬಸವರಾಜ ಬುಡಕುಂಟಿ, ಶರಣಪ್ಪ ಚೂರಿ, ಮರಿಸತ್ಯಪ್ಪ ಭಾಗವಹಿಸಿದ್ದರು,
ನಂತರ ನಡೆದ ಸಾಂಸ್ಕೃತಿಕ ಸೌರಭದಲ್ಲಿ ಶರಣಪ್ಪ ವಡಿಗೇರಿ ಮತ್ತು ಕುಮಾರಿ ಹೊಳಿಯಮ್ಮ ಗುಡದೂರು ಅವರಿಂದ ಜಾನಪದ ಗೀತೆ ಮತ್ತು ಲಾವಣಿ ಪದಗಳ ಕಾರ್ಯಕ್ರಮವು ಜನಮನ ರಂಜಿಸಿತು. ದೇವೇಂದ್ರಪ್ಪ ಕಮ್ಮಾರ, ಸುಕಮುನಿ ಗಡಗಿ ಸಂಗೀತ
ಸಾಥ ನೀಡಿದರು. ಕೊಳ್ಳಪ್ಪ ಬೂದ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.


Leave a Reply