Koppal

ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ


ಕುಷ್ಟಗಿ: ಕುಷ್ಟಗಿ-ಗುಮಗೇರಾ ಸೋಲಾರ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸರಿಯಾದ ವೇತನ ಬೋನಸ್ ಹಾಗೂ ಪಿಎಫ್ ಹಾಗೂ ಇಎಸ್ಐ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಇದುವರೆಗೆ ಯಾವುದೇ ಕ್ರಮ ಆಗಿಲ್ಲ ಅಂದರೆ ಹೇಗೆ ಎಂದು, ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು,ಸೋಲಾರ್ ಕಂಪನಿಯವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದ ನಾಲ್ಕು ವರ್ಷದ ಹಿಂದೆ ನಿಮಗೆ ಕಂಪನಿಯಿಂದ ಲಿಖಿತರೂಪದಲ್ಲಿ ಭರವಸೆ ನೀಡಿದ್ದಾರೆ ಆದರೆ ಇದುವರೆಗೂ ಯಾವುದೇ ಬೇಡಿಕೆಗಳು ಕಂಪನಿಯಿಂದ ಈಡೇರಿಸುವುದಕ್ಕೆ ಆಗಿಲ್ಲ ಹಾಗಾಗಿ ನಿಮ್ಮ ಕಾರ್ಮಿಕ ಇಲಾಖೆ ಏನು ಮಾಡುತ್ತಿದೆ ಎಂಬುದರ ಬಗ್ಗೆ ಸ್ಪಷ್ಟೀಕರಣ ಕೊಡಿ ,ಹಾಗೂ ಈತರ ಪ್ರತಿಭಟನೆಗಳು ಮತ್ತು ಹೋರಾಟ ನಡೆದಾಗ ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಮ್ಮ ಕಚೇರಿಯಲ್ಲಿ ಕುಳಿತು ಕೊಳ್ಳದೇ ಕಾರ್ಮಿಕರು ಹೋರಾಟ ನಡೆಸುವ ಸ್ಥಳಕ್ಕಾಗಮಿಸಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬೇಕು, ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿಮ್ಮ ಇಲಾಖೆ ಬಹುಮುಖ್ಯ ಪಾತ್ರ ವಹಿಸಿ ಪರಿಹಾರ ಒದಗಿಸಿಕೊಡಬೇಕೆಂದು ಸೂಚಿಸಿದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply