Belagavi

ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಪಕ್ಷ ಮೇಲುಗೈ


ಕಿತ್ತೂರು: ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ವು ಇಂದು ಹೊರಬಿದ್ದಿದ್ದು ಬಿಜೆಪಿ ಪಕ್ಷ ಸರಳ ಬಹುಮತದತ್ತ ದಾಪು ಗಾಲು ಇಟ್ಟಿದ್ದು ಮೇಲುಗೈ ಸಾಧಿಸಿದೆ. ಒಟ್ಟು 18 ವಾರ್ಡ್ ಗಳಲ್ಲಿ ಬಿಜೆಪಿ ಪಕ್ಷ 9 ವಾರ್ಡ್ ಗಳಲ್ಲಿ ಜಯಗಳಿಸಿದರೆ, ಕಾಂಗ್ರೆಸ್ ಪಕ್ಷ 5 , ಹಾಗೂ 4 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿ ಗಳು ಜಯಗಳಿಸಿದ್ದಾರೆ.

ಇನ್ನೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಸಂಭ್ರಮ ಆಚರಣೆಯಲ್ಲಿ ಪಾಲ್ಗೊಂಡ ಶಾಸಕ ಮಹಾಂತೇಶ್ ದೊಡ್ಡಗೌಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳು ಹಾಗೂ ಕಿತ್ತೂರಿನಲ್ಲಿ ಆದ ನಮ್ಮ ಅಭಿವೃದ್ಧಿ ಕೆಲಸಗಳು ನಮಗೆ ಮೇಲುಗೈ ಸಾದಿಸುವುದಕ್ಕೆ ಸಹಕಾರಿ ಯಾಗಿವೆ ಎಂದು ಹೇಳಿದರು,

ಇನ್ನೂ ಬ್ಲ್ಯಾಕ್ ಅಧ್ಯಕ್ಷ ಬಸವರಾಜು ಪರವಣ್ಣನವರ್ ಮಾತನಾಡಿ ಈ ಗೆಲುವು ನಮ್ಮ ಬಿಜೆಪಿ ಕಾರ್ಯಕರ್ತರ ಶ್ರಮದ ಗೆಲುವು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಉಳವಪ್ಪ ಉಳ್ಳೆಗಡ್ಡಿ, ಶ್ರೀಕರ ಕುಲಕರ್ಣಿ, ಸಂದೀಪ್ ದೇಶಪಾಂಡೆ, ಬಸನಗೌಡ ಸಿದ್ರಾಮಣಿ ಹಾಗೂ ದಿನೇಶ್ ವಳಸಂಗ ಸೇರಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply