Koppal

ಕಾರ್ಮಿಕ ಇಲಾಖೆ ಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ – ತಹಸೀಲ್ದಾರ ಸಿದ್ದೇಶ ಎಂ ಹೇಳಿಕೆ


ಕುಷ್ಟಗಿ: ಡಿ.29- ರಂದು ಸಾಯಂಕಾಲ ಕುಷ್ಟಗಿ -ಗುಮಗೇರಾ ವ್ಯಾಪ್ತಿಯಲ್ಲಿ ಇರುವ ಸೋಲಾರ್ ವಿದ್ಯುತ್ ಘಟಕ ದ ಹತ್ತಿರ ಸೋಲಾರ್ ಘಟಕದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕ ರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದರು.

ಈಗಾಗಲೇ ಹಲವಾರು ಬಾರಿ ಹೋರಾಟ ಪ್ರತಿಭಟನೆ ಮಾಡಿದರೂ ಸೋಲಾರ್ ಘಟಕದವರು ಯಾವುದೇ ರೀತಿಯ ಕಾರ್ಮಿಕರ ಬೇಡಿ ಕೆಯನ್ನು ಈಡೇರಿಸಿರುವದಿಲ್ಲ.ಹಾಗಾಗಿ ಡಿ.31 ಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದೇನೆ.ಆವತ್ತಿನ ದಿನ ಕಂಪನಿ ಮತ್ತು ಕಾರ್ಮಿಕ ಇಲಾಖೆಯವರ ಜೊತೆ ಜಂಟಿಯಾಗಿ ಚರ್ಚಿಸಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆಯನ್ನು ಕುಷ್ಟಗಿ ತಹಸೀಲ್ದಾರ ಸಿದ್ದೇಶ ಎಂ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕುಷ್ಟಗಿ ಪೋಲಿಸ್ ಠಾಣೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾತನಾಡಿ ಕಾನೂನು ಬಾಹಿರ ವಾಗಿ ಪ್ರತಿಭಟನೆ ಮಾಡಬಾರದು ,ನಿಮ್ಮೊಂದಿಗೆ ನಮ್ಮ ಇಲಾಖೆ ಕಾನೂನು ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದರು.ಕಾರ್ಮಿಕರ ಪರವಾಗಿ ಹೈದ್ರಾಬಾದ್ ಕರ್ನಾಟಕ ಯುವ ಶಕ್ತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಗಾಣಿಗೇರ ಮಾತನಾಡಿ ನಮ್ಮ ಕಾರ್ಮಿಕ ರ ಬೇಡಿಕೆ ಇಡೇರುವವರೆಗೂ ಶಾಂತಿ ಯುತ ಧರಣಿ ಸತ್ಯಾಗ್ರಹ ಮಾಡಲಾಗುವುದು,ಒಂದು ವೇಳೆ ಕಾರ್ಮಿಕ ರ ಬೇಡಿಕೆಗಳು ಈಡೇರದಿದ್ದರೆ ಹೋರಾಟದ ರೂಪ ಬದಲಾವಣೆ ಪ್ರತಿಭಟನೆ ಮಾಡಲಾಗುವದು ಎಂದರು.

ಇದೇ ಸಂದರ್ಭದಲ್ಲಿ ಪಿಎಸ್ಐ ಕೆ.
ತಿಮ್ಮಣ್ಣ. ಹೈದರಾಬಾದ್ ಕರ್ನಾಟಕ ಯುವ ಶಕ್ತಿ ವೇದಿಕೆ ಕಾರ್ಯದರ್ಶಿ ಕಿರಣ ಹಾಗೂ ಉಳಿದ ಹೋರಾಟ ಸಮಿತಿ ಸದಸ್ಯರು ಕಾರ್ಮಿಕ ರು ಕಂಪನಿಯ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply