Belagavi

400 ಶೌಚಾಲಯಗಳನ್ನು ನುಂಗಿ ನೀರು ಕುಡಿದ ಅಧಿಕಾರಿಗಳು: ಭೀಮಪ್ಪಾ ಗಡಾದ ಆರೋಪ


ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹುಣಶ್ಯಾಳ (ಪಿ.ಜಿ.) ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೆಲ ಸದಸ್ಯರುಗಳು ಸೇರಿಕೊಂಡು 2018ನೇ ಸಾಲಿನ ಸ್ವಚ್ಛ ಭಾರತ ಯೋಜನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸರಕಾರದ ಪ್ರೋತ್ಸಾಹ ಧನವನ್ನು ಪಡೆದುಕೊಂಡು ಶೌಚಾಲಯಗಳನ್ನು ಕೇವಲ ದಾಲೆಗಳಲ್ಲಿ ಮಾತ್ರ ತೋರಿಸಿ ಸುಮಾರು 400ಕ್ಕಿಂತಲೂ ಹೆಚ್ಚು ಶೌಚಾಲಯಗಳನ್ನು ತಿಂದು ಹಾಕಿರುವ ಘಟನೆಯೂ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿರುವುದು ಇಷ್ಟೊಂದು ಬೃಹತ್ ಭ್ರಷ್ಟಾಚಾರದ ಬಗ್ಗೆ ದಾಖಲೆಗಳೊಂದಿಗೆ ದೂರು ನೀಡಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕಾಗಿ ಪತ್ರ ಬರೆದಿದ್ದರೂ ಕೂಡಾ ರಾಜಕೀಯ ಒತ್ತಡಕ್ಕೆ ಸಿಲುಕಿದ ಅಧಿಕಾರಿಗಳು ತನಿಗೆ ವಿಳಂಭ ಮಡುತ್ತಿದ್ದು, ಭ್ರಷ್ಟರ ರಕ್ಷಣೆಗೆ ನಿಂತಿರುವ ಅಧಿಕಾರಿಗಳ ಮೇಲೆ ಕೂಡಾ ಕ್ರಮಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೂ ಮತ್ತು ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ.

ನಿರ್ಮಲ ಭಾರತ ಯೋಜನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವ ಸಲುವಾಗಿ ಪ್ರತಿಯೊಂದು ಕುಟುಂಬಕ್ಕೂ ಶೌಚಾಲಯಗಳನ್ನು ನಿರ್ಮಿಸಿಕೊಂಡ ನಂತರ ಪ್ರತಿ ಶೌಚಾಲಯಕ್ಕೆ 12000ರೂಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಈ ಬೃಹತ್ ಪ್ರಮಾಣದ ಹಗರಣದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆಲ ಸದಸ್ಯರುಗಳು ಸೇರಿಕೊಂಡು ತಾವೇ ಶೌಚಾಲಯಗಳನ್ನು ನಿರ್ಮಿಸಿಕೊಡುವುದಾಗಿ ಫಲನಾಭವಿಗಳನ್ನು ನಂಬಿಸಿ ಅವರ ಖಾತೆಗೆ ಸರಕಾರದ ಪ್ರೋತ್ಸಾಹ ಧನವನ್ನು ಜಮೆ ಮಾಡಿಸಿ ಬಳಿಕ ಅವರಿಂದ ಸಹಿ ಪಡೆದುಕೊಂಡು ಪ್ರೋತ್ಸಾಹ ಧನವನ್ನು ಕಬಳಿಸಿದ್ದಾರೆ, ಅಲ್ಲದೇ ಇದೂವರೆಗೂ ಯಾರೊಬ್ಬರಿಗೂ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿರುವುದಿಲ್ಲ ಇದರಿಂದಾಗಿ ಸರಕಾರ ಮಹತ್ವಾಕಾಂಕ್ಷೆಯ ನಿರ್ಮಲ ಭಾರತ ಯೋಜನೆಯ ಹಣವು ಖದೀಮರ ಪಾಲಾಗಿರುತ್ತದೆ.

ವಿಚಿತ್ರವೆಂದರೆ 26 ಕುಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸ್ಥಳದ ಲಭ್ಯತೆ ಇರದೇ ಇರುವುದರಿಂದ ಗ್ರಾಮ ಕರೆಮ್ಮ ದೇವರ ಗುಡಿಯ ಹತ್ತಿರ 26 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಆದರೆ ಇವುಗಳಿಗೆ ಬಾಗಿಲು ಕಿಟಕಿಗಳು ಇರುವುದಿಲ್ಲ. ನೀರಿನ ವ್ಯವಸ್ಥೆಯಂತು ಇಲ್ಲವೇ ಇಲ್ಲ ಗಮನಿಸಬೇಕಾಗ ಅಂಶವೆಂದರೆ ಇವುಗಳ ಸುತ್ತಮುತ್ತಲು ಗಿಡ-ಗಂಟಿಗಳು ಬೆಳೆದಿದ್ದು ಇದುವರೆಗೂ ಒಬ್ಬರು ಕೂಡಾ ಇಲ್ಲಿ ಶೌಚ ಮಾಡಿರುವುದಿಲ್ಲ. ಎಂದು ಸದರ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಶೌಚಾಲಯಗಳನ್ನೇ ತಿಂದು ಹಾಕಿರುವ ಹಗರಣದ ಬಗ್ಗೆ ದಾಖಲೆಗಳ ಸಮೇತವಾಗಿ ದಿನಾಂಕ: 21-10-2021 ರಂದ ದೂರು ನೀಡಿದ್ದರು ಯಾವುದೇ ಪರಿಹಾರ ದೊರಕದೇ ಇದ್ದಾಗ ಮನಃ ದಿನಾಂಕ: 06-12-2021 ರಂದು ಪತ್ರ ಬರೆದು ಗಮನಸೆಳೆಯಲಾಗಿದೆ. ಕುರಿತು ಸರಕಾರಕ್ಕೆ ಕೂಡಲೇ ನೀಡುವಂತೆ ವರದಿ ಆಯುಕ್ತರು, ನೈರ್ಮಲ್ಯ ಇಲಾಖೆ, ಬೆಂಗಳೂರು ಇವರಿಂದ ದಿನಾಂಕ: 24-11-2021 ರಂದು ಪತ್ರ ಬರೆದಿದ್ದರು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಕ್ರಮಕೈಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಎಂದು ಸಹ ಈ ದೂರಿನಲ್ಲಿ ತಿಳಿಸಲಾಗಿದೆ. ಫಲಾನುಭವಿಗಳ ಹೆಸರಿನೊಂದಿಗೆ ದಾಖಲೆ ಸಮೇತ ದೂರನ್ನು ನೀಡಿದ್ದರು. ಅಧಿಕಾರಿಗಳು ಕ್ರಮ ಕೈಕೊಳ್ಳದೇ ಇರುವುದನ್ನು ನೋಡಿದರೆ, “ಶೌಚಾಲಯಗಳನ್ನು ತಿಂದು ಹಾಕಿರುವ ಭ್ರಷ್ಟ ಅಧಿಕಾರಿಗಳನ್ನು ಸರಕಾರ ರಕ್ಷಿಸಲು ನಿಂತಂತೆ ಕಾಣುತ್ತಿದೆ ಕಾರಣ ಈ ಕುರಿತು ತ್ವರಿತವಾಗಿ ಕ್ರಮ ಕೈಕೊಂಡು ತಪ್ಪಿತಸ್ಥರಿಗೆ ಕಾನೂನಿನ ರೀತಿ ಶಿಕ್ಷೆ ವಿಧಿಸುವುದರ ಮೂಲಕ ಕಾನೂನಿನ ಘನತೆ-ಗೌರವ ಹೆಚ್ಚಿಸುವಂತೆ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿದೆ ಎಂದು ಮೂಡಲಗಿ ಸಮಾಜ ಸೇವಕರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಾದ ಭೀಮಪ್ಪ ಗು ಗಡಾದ ತಿಳಿಸಿದ್ದಾರೆ.


Leave a Reply