Belagavi

ಕನ್ನಪರ ಸಂಘಟನೆಗಳ ಸಾಂಕೇತಿಕ ಧರಣಿ, ಎಂಇಎಸ್ ಮತ್ತು ಶಿವಸೇನೆಗೆ ಪೊಲೀಸ್ ಭದ್ರತೆ


ಬೆಳಗಾವಿ: ಎಂಇಎಸ್ ಸಂಘಟನೆ ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು ಆದರೆ ಬಂದ್ ಹಿಂಪಡೆದ ಸಂಘಟನೆಗಳು ಸಾಂಕೇತಿಕ ಹೋರಾಟಕ್ಕೆ ಮುಂದಾಗಿದ್ದು ಈ  ಹಿನ್ನೆಯಲ್ಲಿ ಬೆಳಗಾವಿ ನಗರದಲ್ಲಿರುವ ಎಂಇಎಸ್ ಹಾಗೂ ಶಿವಸೇನಾ ಕಚೇರಿಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಬೆಳಗಾವಿ ನಗರದ ಕಾಲೇಜ್ ರಸ್ತೆಯಲ್ಲಿರುವ ತಾಲೂಕಾ ಎಂಇಎಸ್ ಕಚೇರಿ ಹಾಗೂ ರಾಮಲಿಂಗಖಿಂಡ್ ಗಲ್ಲಿಯ ಮುಖ್ಯ ಕಚೇರಿ ಹಾಗೂ ಶಿವಸೇನಾ ಕಚೇರಿಗೆ ಪೊಲೀಸ್  ಬಿಗಿ ಭದ್ರತೆ ಒದಗಿಸಲಾಗಿದೆ.

ಬೆಳಗಾವಿಯಲ್ಲಿ ಶಾಂತಿ ಕದಡಿ ಬಂಧನಕ್ಕೊಳಗಾದ 37 ಪುಂಡರ ವಿರುದ್ಧ ರಾಜ್ಯದ್ರೋಹ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ವಿವಿಧ ಕನ್ನಡಪರ ಸಂಘಟನೆಗಳು ನೀಡಿರುವ ಸಾಂಕೇತಿಕ ಪ್ರತಿಭಟನೆ ಹಿನ್ನೆಲೆ ಬೆಳಗಾವಿ ನಗರದಲ್ಲಿ ಶಿವಸೇನೆ ಹಾಗೂ ಎಂಇಎಸ್ ಕಚೇರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.


Leave a Reply