Belagavi

ಬಡ ವಿದ್ಯಾರ್ಥಿಗಳಿಗಾಗಿಯೇ ಹುಟ್ಟುಹಾಕಿದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ -ಡಾ.ಅಲ್ಲಮಪ್ರಭು ಸ್ವಾಮೀಜಿ


ಬೆಳಗಾವಿ : ನಾಗನೂರು ರುದ್ರಾಕ್ಷಿಮಠ ವು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿತು ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ ಅಲ್ಲಮಪ್ರಭು ಮಹಾಸ್ವಾಮೀಜಿ ಹೇಳಿದರು .

ಅವರಿಂದು ಸಿದ್ದರಾಮೆಶ್ವರ ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು .
ಉತ್ತರ ಕರ್ನಾಟಕ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗೊಂಡು ಲಿಂಗೈಕ್ಯ ಡಾ. ಶಿವಬಸವ ಶ್ರೀಗಳು ಶ್ರೀಮಠದಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು ಅವರ ಆಶಯ ಹಾಗೂ ಚಿಂತನೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದ ಅವರು ವಿದ್ಯಾರ್ಥಿಗಳು ಮೊಬೈಲ್ ಫೇಸ್ ಬುಕ್ ವಾಟ್ಸ್ ಆ್ಯಪ್ ಗಳಿಂದ ದೂರ ಇದ್ದು ಕೇವಲ ವಿದ್ಯಾಭ್ಯಾಸದತ್ತ ಮನಸ್ಸನ್ನು ಕೇಂದ್ರೀಕರಿಸಬೇಕು ,ವಿದ್ಯೆ ಬೇಕಾದವ ಸುಖವನ್ನು ತ್ಯಾಗ ಮಾಡಬೇಕು ,ವಿದ್ಯಾರ್ಥಿ ಜೀವನದಲ್ಲಿ ಸುಖವನ್ನು ತ್ಯಾಗ ಮಾಡಿದವರ ಇಡೀ ಜೀವನ ಸಂಪೂರ್ಣ ಸುಖಮಯವಾಗುತ್ತದೆ ಎಂದು ಶ್ರೀಗಳು ನುಡಿದರು. ರೂ 5 ಕೋಟಿ ವೆಚ್ಚದಲ್ಲಿ ವಿಜ್ಞಾನ ಕಾಲೇಜಿನ ಕಟ್ಟಡ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದವರು ಹೇಳಿದರು .
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ವಿ .ಅವರು ಮಾತನಾಡಿ ಸದರಿ ಶಿಕ್ಷಣ ಸಂಸ್ಥೆಯ ವಿಜ್ಞಾನ ಕಾಲೇಜಿಗೆ ಪ್ರಾಯೋಗಿಕ ಪರೀಕ್ಷಾ ಕೇಂದ್ರವನ್ನು ಒದಗಿಸಲಾಗಿದೆ ಮತ್ತು ಸರಕಾರದಿಂದ ಎಲ್ಲ ರೀತಿಯ ಸೌಲಭ್ಯ ಮತ್ತು ಸಹಕಾರ ನೀಡಲು ಪ್ರಯತ್ನಿಸುವುದಾಗಿ ಹೇಳಿದರು .
ಮತ್ತೊಬ್ಬ ಮುಖ್ಯ ಅತಿಥಿ ಬೆಳಗಾವಿಯ ಪೊಲೀಸ್ ಉಪಾಯುಕ್ತ ನಾರಾಯಣ ಭರಮನಿ ಅವರು ಮಾತನಾಡಿ ಕರ್ನಾಟಕ ರಾಜ್ಯದ ಮತ್ತು ಪ್ರಮುಖವಾಗಿ ಬೆಳಗಾವಿ ಗಡಿ ಭಾಗದ ಬಹುತೇಕ ಎಲ್ಲಾ ಆಗು ಹೋಗುಗಳಲ್ಲಿ ಶ್ರೀಮಠವು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದನ್ನು ನೆನಪಿಸಿಕೊಂಡರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಕೆ ಬಿ ಹಿರೇಮಠ ಅವರು ಮಾತನಾಡಿ ಎಲ್ ಕೆಜಿ ಯಿಂದ ಹಿಡಿದು ಪದವಿ ಶಿಕ್ಷಣ ಸ್ನಾತಕ ಮತ್ತು ಇಂಜಿನಿಯರಿಂಗ್ ಶಿಕ್ಷಣದವರೆಗೆ ಎಲ್ಲಾ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಸಂಸ್ಥೆ ಒಳಗೊಂಡಿವೆ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಇಂಜಿನಿಯರ್ ಮಹೇಶ್ ಹೆಬ್ಬಾಳೆ ,ಪ್ರಾಚಾರ್ಯ ಸಿದ್ದರಾಮ ರೆಡ್ಡಿ ,ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜಿನ ಪುಂಡಲೀಕ ಕಾಂಬ್ಳೆ ,ಗುತ್ತಿಗೆದಾರ ವೈಭವ್ ಬಡಮಂಜಿ , ಶ್ರೀ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯ ಮುರುಗೇಶ್ ಶಿವಪೂಜಿ , ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ. ಎ ಎಲ್ ಪಾಟೀಲ್ ,ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
ಕಾರ್ಯಕ್ರಮವನ್ನು ಉಪನ್ಯಾಸಕ ಎ ಕೆ ಪಾಟೀಲ ಅವರು ನಿರ್ವಹಿಸಿದರು ,ಶ್ರೀಮತಿ ಶಶಿಕಲಾ ಅವರು ಸ್ವಾಗತಿಸಿದರು ,ವಿಜ್ಞಾನ ಕಾಲೇಜಿನ ಮುಖ್ಯಸ್ಥ ಪ್ರವೀಣ್ ಪಾಟೀಲ್ ವಂದಿಸಿದರು .


Leave a Reply