Belagavi

ಮಕ್ಕಳನ್ನು ಗೀಚಲು ಬಿಡಿ ಅವರೇ ಪ್ರಸಿದ್ಧ ಚಿತ್ರಕಲಾವಿದರಾಗಬಹುದು ಚಿಣ್ಣರ ಅಮೂರ್ತ ಕಲಾಪ್ರದರ್ಶನದಲ್ಲಿ ಕೆ. ವಿ. ಸುಬ್ರಮಣ್ಯಂ ಅಭಿಪ್ರಾಯ


ಬೆಳಗಾವಿ ೩೧ -ಮಕ್ಕಳನ್ನು ಗೀಚಲು ಬಿಡಿ ಅವರೇ ಮುಂದೆ ಸುಪ್ರಸಿದ್ಧ ಕಲಾವಿದರಾಗಬಹುದು. ಗೋಡೆಯ ಮೇಲೆ ಮಕ್ಕಳು ಗೀಚಿದಾಗ ಮಕ್ಕಳ ಭಾವನೆಯನ್ನು ಅರಿತುಕೊಳ್ಳದ ಪಾಲಕರು ದಂಡಿಸುತ್ತಾರೆ ಹೀಗೆ ಮಾಡದೇ ಮಕ್ಕಳನ್ನು ಪ್ರೋತ್ಸಾಹಿಸಿದಲ್ಲಿ ಅವರೇ ರಾಷ್ಟç, ಅಂತರರಾಷ್ಟç ಮಟ್ಟದ ಕಲಾವಿದರಾಗಬಹದು ಎಂದು ಖ್ಯಾತ ಕಲಾ ಇತಿಹಾಸ ತಜ್ಞರು, ಕಲಾ ವಿಮರ್ಶಕರಾದ ಕೆ. ವಿ. ಸುಬ್ರಮಣ್ಯಂ ಇಂದಿಲ್ಲಿ ಹೇಳಿದರು.
ಕಲಾವಿದೆ ಶ್ರೀಮತಿ ಮೀನಾಕ್ಷಿ ಬಿ. ಸದಲಗೆ ಅವರು ಸಂಯೋಜಿಸಿದ್ದ ‘ವರ್ಣ ನಿರಂತರ’ ಚಿಣ್ಣರ ಅಮೂರ್ತ ಚಿತ್ರಕಲಾ ಪ್ರದರ್ಶನವನ್ನು ಡಿ. ೩೧ ಗುರುವಾರದಂದು ನಗರದ ಗೋವಾವೇಸ ಹತ್ತಿರವಿರುವ ಸ್ಟುಡಿಯೋ ಆರ್ಕೆನೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಕ್ಕಳ ಚಿತ್ರಕಲೆ ಕುರಿತು ಉಪನ್ಯಾಸ ನೀಡಿದ ಕೆ. ವಿ. ಸುಬ್ರಮಣ್ಯಂ ಅವರು ಪಾಲಕರಿಗೆ ಕಿವಿಮಾತು ಹೇಳಿದರು.
ಮಕ್ಕಳಿಗೆ ಮಾತನಾಡಲು ಶಬ್ದಗಳನ್ನು ಕಲಿಸುವಂತೆ ಚಿತ್ರಗಳನ್ನು ಬಿಡಿಸಲೂ ಪಾಲಕರು ಕಲಿಸಲಿ. ಮಕ್ಕಳು ಚಿತ್ರಗಳನ್ನು ಕಾಪಿ ಮಾಡುತ್ತ ಹೋಗಲಿ ಮುಂದೆ ಸ್ವಂತಿಕೆ ತಾನೇ ತಾನಾಗಿ ಬರುತ್ತದೆ ಎಂದು ಹೇಳಿದರು.
ಆರ್ಟ ಅಫೆಯರ್ ಕಲಾ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ವಿಶ್ವನಾಥ ಗುಗ್ಗರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಪಾಲಕರು ತಮ್ಮ ಇಚ್ಛೆಯನ್ನು ಮಕ್ಕಳಿಗೆ ಹೊರೆ ಮಾಡದೇ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಭವಿಷ್ಯದಲ್ಲಿ ಒಳ್ಳೊಳ್ಳೆ ಕಲಾವಿದರನ್ನು ನಾವು ಕಾಣಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಡಾ. ಪಿ. ಜಿ. ಕೆಂಪಣ್ಣವರ ಅಮೂರ್ತಕಲೆ ನೆದರಲ್ಯಾಂಡ್ ದಲ್ಲಿ ಹುಟ್ಟಿತಾದರೂ ಇಂದು ಜಗತ್ತಿನ ಎಲ್ಲ ಕಲಾವಿದರನ್ನು ಸೆಳೆಯುತ್ತಲಿದೆ. ಕಲಾವಿದ ತಾವು ಕಂಡದ್ದನ್ನು ಬೇರೆಯವರಿಗೆ ಹಂಚಿಕೊAಡು ಸಂತೋಷ ಪಡುತ್ತಾನೆ. ಕಲೆ ಮೊದಲು ನಂತರ ಲಿಪಿ ಹುಟ್ಟಿಕೊಂಡಿತು. ಕಲೆಯು ಭಾಷೆಗೆ ಪ್ರೇರಣೆಯಾಯಿತು ಎಂದು ಹೇಳಿದರು.
ಕಲಾವಿದರಾದ ದತ್ತಾ ಕಾಮಕರ, ಸಂಜಯ ಲದಾದ ಹಾಗೂ ಬಾಳು ಸದಲಗೆ ಅತಿಥಿಗಳಾಗಿ ಆಗಮಿಸಿದ್ದರು. ಚಿಣ್ಣರ ಅಮೂರ್ತ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಜಕ್ತಾ, ಆದಿತ್ಯಾ, ನೂಪುರ, ಸಮರ್ಥ, ಸಂಚಿತಾ, ದಿಯಾ, ಭೂಮಿ, ಅಭಿಜ್ಞ, ಮೋನಿಕಾ, ಕಾರ್ತಿಕ, ಮನೋಜ್ಞ, ಆರುಷ ಎಂ. ರಿತನ್ಯ, ಸ್ವಸ್ತಿ, ಮಾನಸ್ವಿ, ವೇದ, ಧನಂಜಯ, ನಿತ್ಯಕಿಶೋರಿ, ಸಂಸ್ಕೃತಿ, ಆರುಷ ಕೆ. ಪಾಲ್ಗೊಂಡಿದ್ದರು.
ಧನAಜಯ, ನಿತ್ಯ ಕಿಶೋರಿ ಹಾಗೂ ಪ್ರಾಜಕ್ತಾ ಪ್ರಾರ್ಥಿಸಿದರು. ಕಾರ್ತಿಕ, ಅಭಿಜ್ಞಾ, ಭೂಮಿ, ನೂಪುರ, ಮನೋಜ್ಞಾ. ದಿಯಾ, ಸಮರ್ಥ ಪರಿಚಯಿಸಿದರು. ಶ್ರೀಮತಿ ಮೀನಾ ಸದಲಗೆ ನಿರೂಪಿಸಿದರು.


Leave a Reply