Koppal

ಖಡಕ್ ಅಧಿಕಾರಿ ಎಲ್,ಎಸ್,ಅಗ್ನಿ ಅಸ್ಪೃಶ್ಯತೆ ನಿವಾರಣೆಯ ಕುರಿತು ಅರಿವು ಕಾರ್ಯಕ್ರಮ


ಕೊಪ್ಪಳ :ಹಾಸಗಲ್ ಗ್ರಾಮದಲ್ಲಿ ಅಸ್ಪೃಶ್ಯತಾ ನಿವಾರಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಾಸಗಲ್ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಯ ಕುರಿತು ಅರಿವು ಮೂಡಿಸುವ ಕಾರ್ಯ ಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿಕೊಂಡ ಡಾ. ಅರವಿಂದ್ ಲಂಬು ಸಹಾಯಕ ನಿರ್ದೇಶಕರು ಗ್ರೇಡ್ -1 ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶ್ರೇಣೀಕೃತ ಸಮಾಜದಲ್ಲಿ ಹಿಂದಿನ ಕಾಲದಿಂದಲೂ ಅಸ್ಪೃಶ್ಯತೆಯು ಆಚರಣೆ ಜಾರಿಯಲ್ಲಿದ್ದು ಅನೇಕ ಮಹಾನುಭಾವರು ಜನ್ಮತಾಳಿ ತಮ್ಮ ಜೀವನವನ್ನು ಸಮಾನತೆಯ ಹಂತ ಹಂತವಾಗಿ ಪ್ರಾಚೀನ ಕಾಲದಲ್ಲಿ ಅಮಾನವೀಯ ಸ್ಥಿತಿಯಕ್ಕೂ ದಲಿತರು ಹಿಂದೆ ಕಸಬಾರಿಗೆ ಮುಂದೆ ಬರೇಟು ಹಿಡಿದು ಜೀವಿಸುತ್ತಿರುವ ಪದ್ಧತಿಯಿಂದ ಅನೇಕ ದಾರ್ಶನಿಕರು ಜನ್ಮತಾಳಿ ತುಳಿತಕ್ಕೊಳಗಾದ ಜನಾಂಗಕ್ಕೆ ಅಸ್ಪೃಶ್ಯತೆ ಪದ್ದತಿಯನ್ನು ತೊಡೆದು ಹಾಕಲು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟ ನಿರ್ದೇಶನವಿದೆ ಉದಾ: ಭಗವಾನ್ ಬುದ್ಧ ಮಹಾತ್ಮ ಬಸವಣ್ಣನವರು ಪ್ರಾಚೀನ ಇತಿಹಾಸವನ್ನು ಕೆದಕಿ ನೋಡಿದಾಗ ಸುಮಾರು ವರ್ಷಗಳಿಂದ ಆಚರಣೆಯಲ್ಲಿತ್ತು ಬುದ್ಧ ಮಹಾ ಮಾನವತಾವಾದಿ ಪ್ರಾಚೀನ ಕಾಲದಲ್ಲಿ ಮನುಷ್ಯ ಮನುಷ್ಯರಲ್ಲಿ ಸಮಾನತೆಯ ಕುರಿತು ಸರಳವಾಗಿ ಬೋಧಿಸಿ ಬದಲಾವಣೆ ತಂದವರಾಗಿದ್ದಾರೆ ಅದರಂತೆ 12ನೇ ಶತಮಾನದಲ್ಲಿ ಬಸವಣ್ಣನವರು ಅಂತರಜಾತಿ ವಿವಾಹ ಮಾಡಿ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ಹೋರಾಡಿ ದಂತವರು ಅಲ್ಲದೆ 21ನೇ ಶತಮಾನದಲ್ಲಿ ಮಹಾ ಮಾನವತಾವಾದಿಯಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರರು ಹಗಲಿರುಳು ತಾನು ತಮ್ಮ ವೈಯಕ್ತಿಕ ಜೀವನದ ಹಂಗುತೊರೆದು ನೋವಲ್ಲಿದ್ದ ಜನರ ಸಲುವಾಗಿ ಹೋರಾಡಿ ಸಮಾನತೆ ತಂದರು. ಅದರ ಪ್ರಯುಕ್ತ ಭಾರತದ ಸಂವಿಧಾನವನ್ನು ಭಾರತೀಯರಿಗಾಗಿ ಎಲ್ಲಾ ವರ್ಗದವರಿಗೆ ಸಮಾಂತರವಾಗಿ ಜೀವನ ಸಾಗಿಸುವಂತೆ ಅನುವು ಮಾಡಿಕೊಟ್ಟಿದ್ದಾರೆ ಎಂದು ನುಡಿದರು.

ಎಲ್, ಎಸ್, ಅಗ್ನಿ ಇವರು ಮಾತನಾಡಿ ಮಾನವನ ಶರೀರದಲ್ಲಿ ಹರಿಯುವ ರಕ್ತ ಕೆಂಪು ತಾನೇ ಯಾಕೆ ಭೇದಭಾವ ಮಾಡುತ್ತೀರಾ ಆಸ್ಪತ್ರೆ ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ನಾವು ಇತ ಯಾವ ಜಾತಿಯವನೆಂದು ಕೇಳುತ್ತಾ ಕುಡಲಾಗುತ್ತಿದೆಯೇ ಹಾಗೆಯೇ ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರು ನಾವು ಅನ್ಯೋನ್ಯವಾಗಿರಬೇಕು ಎಂದು ಹೇಳಿದರು ಅಲ್ಲದೆ ಭಾರತದ ಸಂವಿಧಾನವನ್ನು ಭಾರತೀಯರಿಗಾಗಿ ಎಲ್ಲಾ ವರ್ಗದವರಿಗೆ ಸಮಾಂತರವಾಗಿ ಜೀವನ ಸಾಗಿಸುವಂತೆ ಅನುವು ಮಾಡಿಕೊಟ್ಟಿದ್ದಾರೆ ಎಂದು ನುಡಿದರು.


Leave a Reply