Koppal

ಜನಮನ ರಂಜಿಸಿದ ಸಂಗೀತ ಕಾರ್ಯಕ್ರಮ


ಕುಷ್ಟಗಿ: ಜ. ೧ ತಾಲೂಕಿನ ಟಕ್ಕಳಕಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಮತ್ತು ಡಾಕ್ಟರ್ ಬಿಆರ್ ಅಂಬೇಡ್ಕರ್ ಸಾಂಸ್ಕೃತಿಕ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕುಷ್ಟಗಿ ಇವರ ಆಶ್ರಯದಲ್ಲಿ ಸಾಮಾನ್ಯ ಯೋಜನೆಯಡಿಯಲ್ಲಿ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಶ್ರೀ ಶಿವನಗೌಡ ಮಾಸ್ತರ್ ಉದ್ಘಾಟಿಸಿದರು ನಂತರ ಮಾತನಾಡಿದ ಅವರು ಸಂಸ್ಕೃತಿ ಇಲಾಖೆಯ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ ನಮ್ಮ ಭಾಗದಲ್ಲಿ ಸಾಕಷ್ಟು ಜನ ಕಲಾವಿದರಿದ್ದಾರೆ ಹೆಚ್ಚು ಅನುದಾನ ಮಂಜೂರು ಮಾಡಿ ಇತರರಿಗೂ ಅವಕಶ ನೀಡಲಿ ಎಂದರು ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಸಂತಕುಮಾರ್ ಶ್ರೀಮತಿ ಶಾಂತಮ್ಮ ಗವಿಸಿದ್ದಪ್ಪ ಮತ್ತು ಶರಣಗೌಡ ಪಾಟೀಲ್ ತಬಲಾ ವಾದಕರು ಫಕೀರಪ್ಪ ಟಕ್ಕಳಕಿ ಭಾಗವಹಿಸಿದ್ದರು ಹಾರ್ಮೋನಿಯಂ ವಾದಕರು ಸುಕುಮನಿ ಗಡಿಗಿ ಅವರು ವಹಿಸಿದ್ದರು ನಂತರ ದೇವೇಂದ್ರಪ್ಪ ಕುಮಾರ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಕೊನೆಯಲ್ಲಿ ಶಿವು ಹಿರೇಮನಿ ನಿರೂಪಿಸಿದರು.


Leave a Reply