Koppal

ಜಕಣಾಚಾರಿ ಸಂಸ್ಮರಣಾ ದಿನಾಚರಣೆ ತಾಲೂಕ ಆಡಳಿತ ನಿರ್ಲಕ್ಷ


ಕುಷ್ಟಗಿ: ಇಡೀ ವಿಶ್ವಕ್ಕೆ ಶಿಲ್ಪಕಲೆಯನ್ನು ಅಜರಾಮರವಾಗಿಸಿದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಆಚರಿಸುವಲ್ಲಿ ತಾಲೂಕ ಆಡಳಿತದ ತಹಶಿಲ್ದಾರ ಸೇರಿದಂತೆ ಬಹುತೇಕ ಸಿಬ್ಬಂದಿಗಳು ಹಾಗೂ ಸ್ಥಳೀಯ ಶಾಸಕ ಅಮರೇಗೌಡ ಬಯ್ಯಾಪುರ ಅವರೂ ಸೇರಿದಂತೆ ಗೈರು ಆಗಿದ್ದು ಹಿಂದುಳಿದ ಸಮಾಜವಾದ ಕುಷ್ಟಗಿ ತಾಲೂಕಿನ ವಿಶ್ವಕರ್ಮ ಸಮುದಾಯದವರು ತೀವ್ರವಾಗಿ ಖಂಡಿಸಿದ್ದಾರೆ.

ಶಿಲ್ಪಕಲೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ವಿದೇಶಿಗರು ನಿಬ್ಬೆರಗಾಗಿ ನೋಡುವಂತೆ ಮಾಡಿದ ಜಕಣಾಚಾರಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಸರಕಾರದ ನಿರ್ದೇಶನದಂತೆ ಸರಿಯಾಗಿ ಮಾಡಿಲ್ಲ. ಸರಿಯಾದ ಮಾಹಿತಿಯನ್ನು ಸಮುದಾಯದ ಮುಖಂಡರಿಗೆ ತಿಳಿಸದೇ ತಾರತಮ್ಯವನ್ನು ಮಾಡಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯವಾದ ವಿಶ್ವಕರ್ಮ ಸಮುದಾಯವನ್ನು ಈ‌ ರೀತಿಯಾಗಿ ಕಡೆಗಣಿಸುವುದು ಯಾವ ನ್ಯಾಯ. ಮುಂದಿನ ದಿನಮಾನದಲ್ಲಿ ಸಮುದಾಯದವರು ಎಲ್ಲರೂ ಒಗ್ಗಟ್ಟಾಗಿ ಹೋರಾಟದ ಮೂಲಕ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಮುದಾಯದವರಾದ ಗುರುಪ್ಪ ಬಡಿಗೇರ, ಸಿದ್ದಪ್ಪ ಬಡಿಗೇರ,ಮಾನಪ್ಪ ಕಮ್ಮಾರ, ಸುರೇಶ ಕಮ್ಮಾರ, ಶರಣಪ್ಪ ಬಡಿಗೇರ, ರಾಮಣ್ಣ ಬಡಿಗೇರ, ಶಾಸ್ವತಪ್ಪ ಬಡಿಗೇರ, ಅಯ್ಯಪ್ಪ ಬಡಿಗೇರ, ಕುಮಾರ ಬಡಿಗೇರ, ಅನೀಲಕುಮಾರ ಕಮ್ಮಾರ ಸೇರಿದಂತೆ ಖಂಡಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply