Koppal

ಬದ್ಧತೆಯಿಂದ ಕಾರ್ಯನಿರ್ವಹಿಸಿ – ಎಮ್ ಚನ್ನಬಸಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು


ಕುಷ್ಟಗಿ:ಶಿಕ್ಷಕ ವೃತ್ತಿ ಪವಿತ್ರವಾದುದ್ದು ಸಾಮಾಜಿಕ ಹೊಣೆಗಾರಿಕೆಯಿಂದ ಕೂಡಿರಬೇಕು , ಸರ್ಕಾರವು ಹಲವಾರು ಪ್ರೋತ್ಸಾಹ ದಾಯಕ ಕಾಯ೯ಕ್ರಮಗಳನ್ನು ಹಮ್ಮಿಕೊಂಡಿದ್ದು ಶಿಕ್ಷಕರು ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಸಂಖ್ಯೆಯನ್ನು ಹೆಚ್ಚಿಸಿ ಸರ್ಕಾರದ ಸೌಲಭ್ಯ ಗಳನ್ನು ಸಮಾಜದ ಕಟ್ಟಕಡೆಯ ಮಗುವಿಗೆ ತಲುಪಿಸಲು ಶಿಕ್ಷಕರು ಶ್ರಮಿಸಬೇಕು , ಸಮುದಾಯದ ಸಹಕಾರದಿಂದ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಸಂಪನ್ಮೂಲ ಕೇಂದ್ರಗಳನ್ನಾಗಿ ಮಾಪ೯ಡಿಸುವ ಶಕ್ತಿಯನ್ನು ಶಿಕ್ಷಕರು ಮೈಗೊಡಿಸಿಕೊಳ್ಳಬೇಕು , ತಾವರಗೇರಾ ಭಾಗದಲ್ಲಿ ಶಿಕ್ಷಕರು ಸಮುದಾಯದ ಸಹಕಾರದಿಂದ ಸ್ಮಾರ್ಟ್ ಕ್ಲಾಸ್ ಗಳನ್ನು ತಯಾರಿಸಿ ಕುಷ್ಟಗಿ ತಾಲೂಕಿಗೆ ಮಾದರಿ ಗಳಾಗಿದ್ದಾರೆ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ನಾಗರಿಕ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ಅಶೋಕ್ ದಾರಿಯಲ್ಲಿ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು, ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬಿ ಆರ್ ಪಿ ಜೀವನ್ ಸಾಬ್ ವಾಲಿಕಾರ್ , ಶಾಲೆಗಳಲ್ಲಿ ಮಕ್ಕಳ ಪಾಲಕರ ಸಭೆ ಆಯೋಜಿಸಿ ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಚರ್ಚೆ ನೆಡಿಸಿ ಕಲಿಕಾ ಪ್ರಗತಿ ಬಗ್ಗೆ ಮಾಹಿತಿನಿಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಕಾಳಜಿ ತೋರಲು ಕೈಜೋಡಿಸಬೇಕೆಂದರು, ಸಿಆರ್ಪಿ ಶರಣಪ್ಪ ತುಮರಿಕೊಪ್ಪ ಮಾತನಾಡಿ ಮಕ್ಕಳ ಕಲಿಕಾ ಕೊರತೆಗಳನ್ನು ನೀಗಿಸಲು ಯೋಜನೆಗಳ ಮೂಲಕ ಕಾರ್ಯೋನ್ಮುಖರಾಗಲು ಸಲಹೆ ನೀಡಿದರು, ಈ ಸಂದರ್ಭದಲ್ಲಿ ಸಿಆರ್ ಪಿ ಎಚ್ ಎಚ್ ಉಸ್ತಾದ್ , ಕಾಶೀನಾಥ್ ನಾಗಲೀಕರ್, ದಾವಲ್ ಸಾಬ್ ಮುಲ್ಲಾ, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಶ್ರೀಮತಿ ಗುರುಪಾದ ಮ್ಮ ಭಂಡಾರಿ , ರುದ್ರೇಶ್ ಬೂದಿಹಾಳ , ತಾವರಗೇರಿ ವಲಯದ ಮುಖ್ಯ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply