Belagavi

ಯೂತ್ ಫಾರ್ ಸೇವಾ ವತಿಯಿಂದ ಪಕ್ಷಿವೀಕ್ಷಣೆ ಶಿಬಿರ


ಬೆಳಗಾವಿ : ಇಂದು ಯೂತ್ ಫಾರ್ ಸೇವಾ ಬೆಳಗಾವಿ ವತಿಯಿಂದ ಪಕ್ಷಿವೀಕ್ಷಣೆ ಶಿಬಿರವನ್ನು ಕರಡಿಗುದ್ದಿ ಅರಣ್ಯವಲಯದಲ್ಲಿ ಹಮ್ಮಿಕೊಂಡಿತ್ತು ಪರಿಸರಕ್ಕೆ ಸಂಬಂಧಪಟ್ಟಂತಹ ಮಾಹಿತಿ ಹಂಚಿಕೊಳ್ಳಲಾಯಿತು.

ಪೇಪರ್ ಬ್ಯಾಗ್ ತಯಾರಿಕೆ ಮಾಡುವುದು, ಬಾಟಲ್ ಇರಿಗೇಶನ್ಪ, ಪಕ್ಷಿಗಳು ಮತ್ತು ಹಾವುಗಳರಕ್ಷಣೆ,  ಪರಿಸರ ಗೀತೆ ಅಭಿಯಾನ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಸರಿಸುಮಾರು 70 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಹಾಗೂ ಯೂತ್ ಫಾರ್ ಸೇವಾ ಜಿಲ್ಲಾ ಸಂಯೋಜಕರಾದ ಶ್ರೀ ಸಂತೋಷ ಖೋತ ಹಾಗೂ ಸ್ವಯಂ ಸೇವಕರಾದ ಸೌರಭ ಕಳಸಕರ ಪಕ್ಷಿವೀಕ್ಷಣೆ ಹಾಗೂ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ಇತರೆ ಸ್ವಯಂ ಸೇವಕರಾದ ಪ್ರೇಮ್ , ಶಂಕರ್, ವಿನಾಯಕ್ ,ನೀಲಾ ,ಭೂಮಿಕಾ, ಅಕ್ಷತಾ, ಮಯೂರಿ, ನಸ್ತೆನ, ಸ್ಪೂರ್ತಿ, ಸ್ವಾತಿ, ಭಾಗಿಯಾಗಿದ್ದರು


Leave a Reply