Koppal

ಕುಷ್ಟಗಿ ಸೋಲಾರ್ ಘಟಕಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬೇಟಿ-ದಾಖಲೆ ಪರಿಶೀಲನೆ


 

ಕುಷ್ಟಗಿ: ಶುಕ್ರವಾರ ಡಿಸೆಂಬರ್.31 ರಂದು ಬೆಳಿಗ್ಗೆ ಯಿಂದ ರಾತ್ರಿ ಸುಮಾರು 8 ಘಂಟೆಯ ವರೆಗೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿಯೇ ಇದ್ದು ಕಾರ್ಮಿಕರ ಸಂಪೂರ್ಣ ಕಾಗದ ಪತ್ರಗಳನ್ನು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ವೀಣಾ ಗಸ್ತಿ,ಹಾಗೂ ಲೇಬರ್ ಇನ್ಸಕ್ಟರ್ ಶಿವಶಂಕರ ತಳವಾರ,ಬೇಡಿಕೆ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಿದರು.

ರೇಸ್ ಪವರ್ ಇನ್ಫ್ರ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾಗೂ ಪಯನೀಯರ್ ಸೆಕ್ಯೂರಿಟಿ ಸಲ್ಯೂಷನ್ ಏಜೆನ್ಸಿ ಅವರು ಘಟಕದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಯಾವೆಲ್ಲ ಸೌಲಭ್ಯಗಳನ್ನು ನೀಡಿದ್ದಾರೆ ಎನ್ನುವುದರ ಬಗ್ಗೆ ಅವರಿಂದ ಮಾಹಿತಿ ಪಡೆದುಕೊಂಡರು.

ರೇಸ್ ಪಾವರ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ನಿರ್ವಹಿಸುವ ಟೆಕ್ನೇಷನ್ ಹಾಗೂ ಲೇಬರ್ ಕೆಲ ಬೇಡಿಕೆಗಳನ್ನು ಈಡೇರಿಸಿ ಕೊಡಲಾಗುವದು ಮತ್ತು ಕೆಲವಿಷ್ಟು ಬೇಡಿಕೆಯ ದಾಖಲೆಗಳನ್ನು ಇವತ್ತೆ ನೀಡಲಾಗುವದು ಮತ್ತು

ಇಎಸ್ ಐ ಕಾಡ್೯ ಮತ್ತು ಐಡಿ ಕಾಡ್೯ಗಳನ್ನು ಕಂಪನಿಯಿಂದ ನೀಡಲು ಒಂದು ವಾರಗಳ ಕಾಲ ಸಮಯ ಕೊಡಿ ಎಂದು ಕಂಪನಿಯ ಪರವಾಗಿ ಪ್ರಾಜೆಕ್ಟ್ ಮ್ಯಾನೇಜರ್ ದಿನೇಶ ಕಾರ್ಮಿಕ ಇಲಾಖೆಯವರಿಗೆ ಮತ್ತು ಕಾರ್ಮಿಕರಿಗೆ ಮನವಿ ಮಾಡಿದರು.ಹಾಗೂ ಕಂಪನಿಯ ಹಿರಿಯ ಇಂಜನೀಯರ್ ಮಂಜುನಾಥ ಕಾರ್ಮಿಕರ ಪಿಫ್ ಮತ್ತು ಇಎಸ್ಐ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.

ಆದ್ರೆ ಕಾರ್ಮಿಕರು ಎಲ್ಲಾ ಬೇಡಿಕೆಗಳು ನಮ್ಮ ಕೈ ಸೇರುವ ವರೆಗೂ ನಾವು ಒಪ್ಪುವದಿಲ್ಲ ಎಂದರು.

ಈ ಹಿಂದೆ ಹಲವು ಬಾರಿ ಬೇಡಿಕೆಗಳು ಈಡೇರಿಸಲು ಕಂಪನಿ ಸಮಯವಕಾಶ ಕೇಳಿದಾಗ ನಾವು ಒಪ್ಪಿಕೊಂಡಿದ್ದೇವು,ಆದ್ರೆ ಆ ಭರವಸೆಗಳು ಇಂದಿಗೂ ಈಡೇರದ ಕಾರಣ ಶಾಂತಿ ಯುತ ಹೋರಾಟ ಮುಂದುವರೆಸಲಾಗುವುದು.ಎಂದು ಕಾರ್ಮಿಕರ ಪರವಾಗಿ ಹೈದರಾಬಾದ್- ಕರ್ನಾಟಕ ಯುವ ಶಕ್ತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ, ಮಾತನಾಡಿದರು.

ಟೆಕ್ನೇಷನ್,ಲೇಬರ್,ಹಾಗೂ ಸೆಕ್ಯೂರಿಟಿ ಗಾಡ್೯ ಹಾಗೂ ಸೆಕ್ಯೂರಿಟಿ ಸೂಪರ್ ವೈಸರ್,ರವರುಗಳ ಬೇಡಿಕೆಗಳು ಕಾನೂನು ರೀತಿ ಸಂಪೂರ್ಣ ಈಡೇರಿಸುವಂತೆ ಒತ್ತಾಯಿಸಿದರು.ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಮುಂದಿನ ಹೋರಾಟ ಬದಲಾವಣೆ ಮಾಡಲಾಗುವುದು ಎಂದು ಸಂಘಟನೆಯ ಕಾರ್ಯಾಧ್ಯಕ್ಷ ಕಿರಣ,ಜ್ಯೋತಿ ಹೇಳಿದರು.

ಕುಷ್ಟಗಿ ತಾಲೂಕಿನ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ತಹಸೀಲ್ದಾರ ಸಿದ್ದೇಶ.ಎಂ,ಸಿಪಿಐ.ನಿಂಗಪ್ಪ ಎನ್.ಆರ್. ಹಾಗೂ ಪಿಎಸ್ಐ.ತಿಮ್ಮಣ್ಣ ಸೇರಿದಂತೆ ಹಲವಾರು ಹೋರಾಟಗಾರರು ,ಧರಣಿ ಸ್ಥಳಕ್ಕೆ ಬೇಟಿ‌ ನೀಡಿ,ಕಂಪನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.

ಜನ ಪ್ರತಿ ನಿಧಿಗಳು ಹಾಗೂ ಮತ್ತು ತಾಲೂಕ ಜಿಲ್ಲಾ ಹಾಗೂ ತಾಲೂಕ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಒಂದು ದಿನ ಸಂಪೂರ್ಣ ಕಾರ್ಮಿಕರು ಹೋರಾಟ ಮಾಡುವ ಸ್ಥಳದಲ್ಲಿಯೇ ಇದ್ದು ಕಾರ್ಮಿಕರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಬಹುದು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply