Belagavi

job alert: ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗಳಿಗೆ ಅರ್ಜಿ ಅಹ್ವಾನ


ಬೆಳಗಾವಿ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ್‌ದಯಾಳ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ೦೫ ಹುದ್ದೆಗಳು ಖಾಲಿ ಇದ್ದು, ಗೌರವಧನ ಮಾಸಿಕ ೮೦೦೦ ರೂ.ಗಳು ಹಾಗೂ ಪ್ರಯಾಣ ಭತ್ತೆ ಗರಿಷ್ಠ ೨೦೦೦ ರೂ.ಗಳನ್ನು ನೀಡಲಾಗುವುದು. ಅರ್ಜಿ ಹಾಕಲು

ಅರ್ಹತೆಗಳು :
೧೮ ರಿಂದ ೪೫ ವಯೋಮಿತಿ ಹೊಂದಿರಬೇಕು.
ಕನಿಷ್ಠ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು.
ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು. (ಪ್ರಮಾಣ ಪತ್ರ ಹೊಂದಿರಬೇಕು). ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ವ-ಸಹಾಯ ಸಂಘದಲ್ಲಿ ಕನಿಷ್ಠ ೦೩ ವರ್ಷದಿಂದ ಸದಸ್ಯೆಯಾಗಿರಬೇಕು. ಸ್ವ-ಸಹಾಯ ಸಂಘವು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯತ್ವ ಹೊಂದಿರಬೇಕು. ಅಭ್ಯರ್ಥಿಯು ಸ್ವ-ಸಹಾಯ ಸಂಘದಿಂದ ಸಾಲ ಪಡೆದು ಮರು ಪಾವತಿಸಿರಬೇಕು/ ಚಾಲ್ತಿಯಲ್ಲಿರಬೇಕು. ಸ್ವ-ಸಹಾಯ ಸಂಘದಿಂದ ಸಾಲ ಪಡೆದು ಕಟಬಾಕಿದಾರರಾಗಿರಬಾರದು.

ಅಭ್ಯರ್ಥಿಯು (ಸಮುದಾಯ ಸಂಪನ್ಮೂಲ ವ್ಯಕ್ತಿಗಳು) ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಮಿತಿಯ ನಿರ್ಣಯವೇ ಅಂತಿಮವಾದದ್ದು, ಆಸಕ್ತ ಅಭ್ಯರ್ಥಿಗಳು ಕಾರ್ಯಾಲಯದ ಅವಧಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕೃತ ದಾಖಲೆಗಳೊಂದಿಗೆ ಜನವರಿ ೧೫ ರೊಳಗಾಗಿ ಬೆಳಗಾವಿ ಮಹಾನಗರ ಪಾಲಿಕೆ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣ ಸಲಾಗುವುದಿಲ್ಲ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply