Belagavi

ವೃದ್ದಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಹಿರಿಯ ಜೀವಿ


ಬೆಳಗಾವಿ – ಇಲ್ಲಿಯ ಶಾಂತಾಯಿ ವೃದ್ದಾಶ್ರಮದಲ್ಲಿ ಉದ್ಯಮಿ ವಿಜಯ ಪಾಟೀಲ ಅವರ ತಾಯಿ ಶಾಂತಾಯಿ ಭರಮಾ ಪಾಟೀಲ ಅವರ ಜನ್ಮ ದಿನವನ್ನು ಶನಿವಾರ ಸಂಜೆ ಆಚರಿಸಲಾಯಿತು.

ವೃದ್ದಾಶ್ರಮದಲ್ಲಿರುವ ಹಿರಿಯರ ಮಧ್ಯೆ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿ ಮದನ್ ಕುಮಾರ ಭೈರಪ್ಪನವರ್ ಅವರು ವೃದ್ದಾಶ್ರಮಕ್ಕೆ 11 ಸಾವಿರ ರೂ.ಗಳ ಆರ್ಥಿಕ ಸಹಾಯ ನೀಡಿದರು.

ಶೃತಿ ಕನಸ್ಟ್ರಕ್ಷನ್ ಪ್ರೊಪರೈಟರ್ ಮದನ್ ಕುಮಾರ ಭೈರಪ್ಪನವರ್, ವಿಜಯ ಮೋರೆ, ನಾಗೇಶ್ ಚೌಗುಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಶ್ರಮವಾಸಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.


Leave a Reply