Belagavi

ಬೆಳಗಾವಿಯಲ್ಲಿ ಕಾರಿಗೆ ಕಲ್ಲು ತೂರಿದ ಮುಸುಕುದಾರಿ ವ್ಯಕ್ತಿ


ಬೆಳಗಾವಿ: ಕಾರಿನ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಬೆಳಗಾವಿಯಲ್ಲಿ ಕಿಡಿಗೇಡಿಗಳು ಮತ್ತೆ ಅಟ್ಟಹಾಸ ಮರೆದಿದ್ದಾರೆ. ತಡರಾತ್ರಿ ಶಿವಾಜಿ ಗಾರ್ಡನ್ ಬಳಿ ಘಟನೆ ನಡೆದಿದೆ.ನಿನ್ನೆ ರಾತ್ರಿ 4:30ರ ಸುಮಾರಿಗೆ ಓರ್ವ ಮುಸುಕುಧಾರಿಯಿಂದ ಮನೆ ಮುಂದೆ ನಿಲ್ಲಿಸಿದ ಕಾರಿನ ನಾಲ್ಕು ‌ಗ್ಲಾಸ್ ಅನ್ನು ಒಡೆದು ಪರಾರಿಯಾಗಿದ್ದಾನೆ.

ಬೆಳಗಾವಿಯ ಗಣಿ ಮಾಲೀಕರು ಮತ್ತು ಮಿನರಲ್ ಟ್ರೇಡ್ಸ ಅಸೊಸಿಯೇಷನ್ ಚೇರ್ಮನ್ ನಿತಿನ್ ಮಹಾಡಗೂತ್ ಎಂಬುವರಿಗೆ ಸೇರಿದ ಕಾರಿಗೆ ಕಿಡಿಗೇಡಿ ಕಲ್ಲು ಎಸೆದಿದ್ದಾನೆ.ಮುಸಕುಧಾರಿ ವ್ಯಕ್ತಿ ಕಾರಿನ ಹಿಂಬದಿಯ ಗ್ಲಾಸಿಗೆ ಕಲ್ಲು ತೂರಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಕಾರು ಮಾಲೀಕನ‌ ಪತ್ನಿ ನಿಧಿ ನಿತಿನ್ ಮಹಾಡಗೂತ್ ಎಂಬುವವರಿಂದ ಕಡೆಬಜಾರ್ ಸಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Leave a Reply