Koppal

ಸರಕಾರಿ ಪ್ರೌಢಶಾಲೆ, ಕೊರಡಕೇರಾದಲ್ಲಿ ಲಸಿಕಾ ಕಾರ್ಯಕ್ರಮ


ಕುಷ್ಟಗಿ :ದಿನಾಂಕ. 4-1-2022 ರಂದು 15-18 ನೇ ವಯೋಮಾನದ ಮಕ್ಕಳಿಗೆ ೯ನೇ,೧೦ನೇ ತರಗತಿ ವಿದ್ಯಾರ್ಥಿಗಳು ಕೋವಿಡ್ 19 ಲಸಿಕೆಯನ್ನು ಹಾಕಿಸಿ ಕೊಳ್ಳಲಾಯಿತು. ಚಳಿಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಯವರು ಲಸಿಕೆ ಹಾಕಿದರು. ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಶ್ರೀಮತಿ ಶಾರದಾ ಇಲಾಳ ರವರು ನಮಗೆ ಕೊವಿಡ್ ನಿಂದ ರಕ್ಷಣೆ ಪಡೆಯಲು ಎಲ್ಲರೂ ತಪ್ಪದೇ ಈ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದರು. ಕೊರಡಕೇರಾ ಪಿ.ಡಿ.ಓ. ಪ್ರಶಾಂತ ಹಿರೇಮಠ ರವರು ಕೋವಿಡ್ ವೈರಸ್ ನಿಂದ ನಾವು ಪಾರಾಗಲು ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳಬೇಕು ಎಂದರು, ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರುಗಳಾದ ರಾಮಚಂದ್ರಪ್ಪನವರು ನಮಗೆ ರೋಗನಿರೋಧಕ ಶಕ್ತಿ ಬರಬೇಕೆಂದರೆ, ಲಸಿಕೆಯನ್ನು ಹಾಕಿಸಿಕೊಳ್ಳಬೇಕು ನಾವು ಸುರಕ್ಷಿತವಾಗಿ ಜೀವಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ಲಸಿಕೆಯನ್ನು ಉಚಿತವಾಗಿ ಕೊಡುತ್ತಿದೆ ಅದನ್ನು ನಾವು ಪಡೆಯುವುದು ಉತ್ತಮ ಎಂದರು. ಗ್ರಾಮ ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು. ಚಳಿಗೇರಾದ ಪಿ.ಎಚ್.ಸಿಯ ಸಿಬ್ಬಂದಿಗಳಾದ ಕಿರಣ್ ಪಾಟೀಲ್, ಸಮುದಾಯ ಆರೋಗ್ಯ ಅಧಿಕಾರಿಗಳು, ಶ್ರೀ ಮತಿ ರೇಣುಕಾ ಗುರುವಿನ, ಪ್ರಾಥಮಿಕ ಆರೋಗ್ಯಾಧಿಕಾರಿ, ಪ್ರಶಾಂತ ಬೆನ್ನೂರು ಸಮುದಾಯ ಆರೋಗ್ಯಾಧಿಕಾರಿ, ಆಶಾಕಾರ್ಯಕರ್ತೆಯರಾದ ಗಂಗಮ್ಮ, ವಿಜಯಲಕ್ಷ್ಮಿ, ಮಲ್ಲಮ್ಮ . ಅಂಗನವಾಡಿ ಕರ್ಯಕರ್ತೆಯರಾದ ಬಸಮ್ಮ, ರತ್ನಮ್ಮ, ಗಂಗಮ್ಮ. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರಾಮೇಶ್ವರ ಡಾಣಿ, ಶಿವನಗೌಡ ಜಾಲಿಹಾಳ, ವಿಕ್ರಾಂತ ಗಜೇಂದ್ರಗಡ, ಮಲ್ಲಪ್ಪ ಭಂಡಾರಿ, ಸಂತೋಷ ನಾಗಲೋಟಿ, ವಿಜಯಕುಮಾರ್ ಬಿರಾದಾರ, ಸಲೀಮಾ ಬೇಗಂ, ಪುಷ್ಪಲತಾ, ಶಾಂತೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಕ್ರಾಂತ ಗಜೇಂದ್ರಗಡ ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಪ್ರಶಾಂತ ಬೆನ್ನೂರು ಮಾತನಾಡಿದರು, ವಿಜಯಕುಮಾರ್ ಬಿರುದಾರ ವಂದನಾರ್ಪಣೆ ಮಾಡಿದರು. ರಾಮೇಶ್ವರ ಡಾಣಿಯವರು ನಿರೂಪಣೆ ಮಾಡಿದರು, 9 ನೇ ವರ್ಗದ 116., ಹಾಗೂ 10 ನೇ ವರ್ಗದ 115 ವಿದ್ಯಾರ್ಥಿಗಳು ಲಸಿಕೆಯನ್ನು ಹಾಕಿಸಿಕೊಂಡರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply