Belagavi

ಸರಕಾರಿ ಶಾಲೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತವೆ: ಮುಖ್ಯೋಪಾಧ್ಯಾಯ ಅರ್ಜುನ ಸಾಗರ


ಬೆಳಗಾವಿ: ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯಬೇಕೆಂದರೆ ಸರಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು ಇಲ್ಲಿ ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿಸಲಾಗುತ್ತದೆ ಎಂದು ಮುಖ್ಯೋಪಾಧ್ಯಾಯ ಅರ್ಜುನ ಸಾಗರ ಹೇಳಿದರು.

ಪುಲ್ವಾಬಾಗ ಗಲ್ಲಿಯ ಸರಕಾರಿ ಪ್ರಾಥಮಿಕ ಶಾಲೆ ನಂ.7ರಲ್ಲಿ ಹಮ್ಮಿಕೊಂಡಿದ್ದ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಮೊದಲ ಸಭೆಯಲ್ಲಿ ಅವರು ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಪಾಲಕರು ಖಾಸಗಿ ಶಾಲೆಗಳ ಕಡೆಗೆ ವಾಲುತ್ತಿದ್ದಾರೆ ಆದರೆ ಸರಕಾರಿ ಶಾಲೆಗಳಲ್ಲಿ ಹಲವು ಯೋಜನೆಗಳಿದ್ದು ಅಕ್ಕರೆಯೊಂದಿಗೆ ಪರಿಣಾಮಕಾರಿ ಪಾಠ ಬೋಧನೆ ಮಾಡಲಾಗುತ್ತಿದೆ ಅದ್ದರಿಂದ ಸರಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕೆಂದರು.

ಮಕ್ಕಳ ದಿನ ನಿತ್ಯದ ಚಟುವಟಿಕೆಯ ಬಗ್ಗೆ ಪಾಲಕರು ತಿಳಿದಿಕೊಳ್ಳುವುದು ಅವಶ್ಯಕವಾಗಿದ್ದು ಈ ರೀತಿ ಸಭೆಗಳಿಗೆ ಬಾಗಿಯಾಗಿ ನಿಮ್ಮ ಮಕ್ಕಳ ಚಟುವಟಿಕೆ ಮತ್ತು ಶಾಲಾ ಕಾರ್ಯಕ್ರಮಗಳನ್ನು ತಿಳಿದಿಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಪಾಲಕರಿಗೆ ಮನವಿ ಮಾಡಿದರು.

ಎಸ್.ಡಿ.ಎಮ್.ಸಿ ಮತ್ತು ಸ್ಥಳಿಯ ಶಾಸಕರ ನೆರವಿನಿಂದ ಶಾಲೆಗೆ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದ್ದು ಒಂದು ಮಾದರಿ ಶಾಲೆ ಮಾಡುವ ಗುರಿಯನ್ನು ಹೊಂದಿದ್ದೆವೆ ಎಂದರು.

ಬಳಿಕೆ ಸಿಆರ್.ಪಿ ಸಂಜಯ ಪಾಟೀಲ ಮಾತನಾಡಿ ಸರಕಾರದ ಆದೇಶದ ಮೇರೆಗೆ ಪ್ರತಿ ತಿಂಗಳು 4,5 ಮತ್ತು6 ರಂದು ಪ್ರತಿ ಸರಕಾರಿ ಶಾಲೆಗಳಲ್ಲಿ ಎಸ್.ಡಿ.ಎಮ್.ಸಿ ಮತ್ತು ಪಾಲಕರ ನೇತೃತ್ವದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಚಯ ಮಾಡಿಸುವುದು ಮತ್ತು ಸರಕಾರಿ ಶಾಲೆಯಲ್ಲಿರುವ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ವಿವರಣೆ ನೀಡುವ ಕಾರಣಕ್ಕಾಗಿ ಈ ಸಭೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಎಸಿ.ಡಿ.ಎಮ್.ಸಿ ಅಧ್ಯಕ್ಷ ಜಗದೀಶ್ ಪಾಟೀಲ ಮಾತನಾಡಿ ಸರಕಾರಿ ಶಾಲೆಯ ಸವಲತ್ತು ಮತ್ತು ಮಕ್ಕಳ ಹಾಜರಾತಿ ಹಾಗೂ ಕಲಿಕೆಯ ಗುಣಮಟ್ಟವನ್ನು ಪಾಲಕರೊಂದಿಗೆ ಚರ್ಚಿಸುವ ಉದ್ದೇಶದಿಂದ ಸರಕಾರವು ಈ ಸಭೆಯನ್ನು ಜಾರಿಗೆ ತಂದಿದೆ. ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿ ತಿಂಗಳು ಶಾಲೆಗಳಲ್ಲಿ ಈ ಮೇಲುಸ್ತುವಾರಿ ಸಭೆಯನ್ನ ಹಮ್ಮಿಕೊಳ್ಳಬೇಕು ಎಂದರು

ಈ ಸಂದರ್ಭದಲ್ಲಿ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಸಭೆಯಲ್ಲಿ ಪಾಲ್ಗೊಂಡಿದ್ದರು.


Leave a Reply