Belagavi

ಕಾಂಗ್ರೇಸ್ ಸಂಸದ ಡಿ.ಕೆ.ಸುರೇಶ ವಿರುದ್ದ ಬೆಳಗಾವಿಯಲ್ಲಿ ಸಿಡಿದೆದ್ದ ಬಿಜೆಪಿ


ಬೆಳಗಾವಿ: ರಾಮನಗರದಲ್ಲಿ ನಿನ್ನೆ ನಡೆದ ಗಲಾಟೆ ಖಂಡಿಸಿ ಕಾಂಗ್ರೇಸ್ ಸಂಸದ ಡಿ.ಕೆ.ಸುರೇಶ ವಿರುದ್ದ ಬಿಜೆಪಿ ನಾಯಕರು ಮುಗಿ ಬಿದ್ದಿದ್ದಾರೆ. ರಾಜ್ಯಾಧ್ಯಂತ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದೇ ರೀತಿ ಬೆಳಗಾವಿಯಲ್ಲಿಯೂ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಮಂಗಳವಾರ ಬೆಳಗಾವಿಯ ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಬಿಜೆಪಿ ಮಹಾನಗರ, ಗ್ರಾಮಾಂತರ ಹಾಗೂ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಸದ ಡಿ.ಕೆ.ಸುರೇಶ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ, ಪ್ರತಿಕೃತಿ ದಹನ ಮಾಡಿ, ಬಾಯಿ ಬಾಯಿ ಬಡಿದುಕೊಂಡು ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿದರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಬಿಜೆಪಿ ಮುಖಂಡ ಮಾತನಾಡಿದ ರಾಜ್ಯದ ಮುಖ್ಯಮಂತ್ರಿಗಳು ವೇದಿಕೆ ಮೇಲೆ ಇದ್ದಾಗ, ಓರ್ವ ಸಚಿವರು ಮಾತನಾಡುವಾಗ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ ನಡೆದುಕೊಂಡ ವರ್ತನೆ, ಮಾತನಾಡಿದ ರೀತಿ ನೋಡಿದ್ರೆ ಅವರ ಸಂಸ್ಕೃತಿ ಏನು ಅಂತಾ ಗೊತ್ತಾಗುತ್ತದೆ.
ಇದೇ ವೇಳೆ ಇನ್ನೊರ್ವ ಬಿಜೆಪಿ ಮುಖಂಡ ಮಾತನಾಡಿ ನಿನ್ನೆ ನಡೆದ ಘಟನೆಗೆ ರಾಜ್ಯ ಅಷ್ಟೇ ಅಲ್ಲದೇ ಇಡೀ ದೇಶಾಧ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಭಾರತ ದೇಶ ಯಾವುದೋ ಕಮ್ಯುನಿಷ್ಟ ಆಡಳಿತಕ್ಕೆ ಒಳಪಟ್ಟಿರುವ ದೇಶ ಅಲ್ಲ. ಇದು ಪ್ರಜಾಪ್ರಭುತ್ವಕ್ಕೆ ಒಳಪಟ್ಟಿರುವ ದೇಶವಾಗಿದೆ. ಮುಖ್ಯಮಂತ್ರಿಗಳು ವೇದಿಕೆ ಮೇಲೆ ಇರುವಾಗ ಸರ್ಕಾರಿ ಕಾರ್ಯಕ್ರಮದಲ್ಲಿ ಓರ್ವ ಚುನಾಯಿತ ಪ್ರತಿನಿಧಿ ಇನ್ನೊರ್ವ ಚುನಾಯಿತ ಪ್ರತಿನಿಧಿ ಮೇಲೆ ಹಲ್ಲೆ ಮಾಡಲು ಹೋಗುತ್ತಿದ್ದಾರೆ ಎಂದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿದರು.
ಇದೇ ವೇಳೆ ಮತ್ತೊರ್ವ ಬಿಜೆಪಿ ಮುಖಂಡ ಮಾತನಾಡಿ ನಿನ್ನೆ ವೇದಿಕೆಯಲ್ಲಿ ಸಚಿವರ ಮೇಲೆ ಹಲ್ಲೆಗೆ ಯತ್ನಿಸಿರುವ ಡಿ.ಕೆ.ಸುರೇಶ ವಿರುದ್ದ ಗೂಂಡಾ ಕಾಯ್ದೆ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶಶಿಕಾಂತ ಪಾಟೀಲ, ಪಾಂಡುರAಗ ಧಾಮಣೆಕರ, ಮುರಗೆಂದ್ರಗೌಡಾ ಪಾಟೀಲ, ರಾಹುಲ ಮುಚಂಡಿ, ರಾಜಶೇಖರ ಡೋನಿ, ಪ್ರಜ್ಞಾ ಶಿಂದೆ, ಮಹಾಂತ ವಕ್ಕುಂದ ಪೃಥ್ವಿಸಿಂಗ್ ಚವ್ಹಾಣ ಸೇರಿದಂತೆ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply