Belagavi

ಕೈಮಗ್ಗ ನೇಕಾರರ/ಕೆಲಸಗಾರರ ಗಣತಿ ಹಾಗೂ ಘಟಕಗಳ ಸಮೀಕ್ಷೆ


ಬೆಳಗಾವಿ: ಜಿಲ್ಲೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ವಿದ್ಯುತ್ ಮಗ್ಗ ನೇಕಾರರ ಹಾಗೂ ಮಗ್ಗಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ಕೆಲಸಗಾರರ ಗಣತಿ ಹಾಗೂ ಘಟಕಗಳ ಸಮೀಕ್ಷೆ ಕಾರ್ಯವನ್ನು ಮೆ|ಅಕಾಡೆಮಿ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್ ಸಂಸ್ಥೆಯ ಮೂಲಕ ಪ್ರಾರಂಭಿಸಲಾಗುತ್ತಿದೆ.

ಸದರಿ ಸಂಸ್ಥೆಯವರು ಗಣತಿ ಹಾಗೂ ಸಮೀಕ್ಷೆಯ ನೋಂದಣಿ ಕೈಗೊಳ್ಳಲು ಜವಳಿ ಘಟಕಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಘಟಕದ ಮಾಲಿಕರು ಆಧಾರ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಪಡಿತರ ಚೀಟಿ, ಘಟಕದ ನೋಂದಣಿ ಪ್ರಮಾಣ ಪತ್ರ, (ಉದ್ಯೋಗ ಆಧಾರ/ಉದ್ಯಮ ರಜಿಸ್ಟ್ರೇಷನ್, ಪಿ.ಎಮ್.ಟಿ), ವಿದ್ಯುತ್ ಮಂಜೂರಾತಿ ಪತ್ರ, ಇತ್ತೀಚಿನ ವಿದ್ಯುತ್ ಬಿಲ್, ಜಿ.ಎಸ್.ಟಿ ಪ್ರಮಾಣ ಪತ್ರ, (ಲಭ್ಯವಿದ್ದಲ್ಲಿ) , ಘಟಕವು ಬ್ಯಾಂಕ್/ಹಣಕಾಸು ಸಂಸ್ಥೆಯಿAದ ಸಾಲ ಪಡೆದಿದ್ದಲ್ಲಿ ಸಾಲ ಮಂಜೂರಾತಿ ಪತ್ರ, ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಕಾರರ| ಕಾರ್ಮಿಕರ ಆಧಾರ ಕಾರ್ಡ್, ಪಾಸ್‌ರ್ಟ್ ಅಳತೆಯ ಭಾವಚಿತ್ರ, ಪಡಿತರ ಚೀಟಿ ಸೇರಿದಂತೆ ಅವಶ್ಯಕ ದಾಖಲಾತಿಗಳನ್ನು ನೀಡಿ ಗಣತಿ ಹಾಗೂ ಘಟಕಗಳ ಸಮೀಕ್ಷೆಯ ನೋಂದಣಿ ಕಾರ್ಯದಲ್ಲಿ ಸಹಕರಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಅನಗೋಳ, ಬೆಳಗಾವಿ ಈ ಕಛೇರಿಗೆ ಹಾಗೂ ದೂರವಾಣಿ ಸಂಖ್ಯೆ: 0831-2950674 ಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply