Belagavi

ಪಾರ್ಥನಹಳ್ಳಿ ಗ್ರಾ.ಪಂ : ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಬೆಂಬಲಿಗರು


ಬೆಳಗಾವಿ :  ಜಿಲ್ಲೆಯ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾರ್ಥನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಮರುಚುನಾವಣೆ ಮಂಗಳವಾರ ನಡೆಯಿತು.

ಗ್ರಾಮದ ಅಭಿವೃದ್ಧಿ ಅಧಿಕಾರಿಗಳಾದ ಹೆಚ್, ವಾಯ್, ದೊಡ್ಡಮನಿ ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಕರಿಬಸಪ್ಪಗೋಳ ಅವರ ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು.

ಶಾಂತಿಯುತವಾಗಿ ಚುನಾವಣೆ ಮುಗಿದ ಬಳಿಕ ಮಧ್ಯಾನ್ಹ ಫಲಿತಾಂಶ ಪ್ರಕಟವಾಯಿತು. ಬಿಜೆಪಿ ಬೆಂಬಲಿಗರಾದ “ಸೋನಾಬಾಯಿ ಬಾಹುಸಾಬ ಚವಾನ್” ಅಧಿಕೃತವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 19 ಸದಸ್ಯರಿದ್ದು ಚುನಾವಣೆಯಲ್ಲಿ 10 ಮತಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡೆದಿದ್ದಾರೆ. ಇದೇ ಸಂದರ್ಭದಲ್ಲಿ ಮುಖಂಡರಾದ “ಬಾಹುಸಾಹೇಬ ಜಾದವ” ಮಾಧ್ಯಮ ಜೋತೆ ಮಾತನಾಡಿ ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಲು ಸಹಕರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನ ತಿಳಿಸಿ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜನಪರ ಕಾರ್ಯಗಳನ್ನ ಮಾಡುತ್ತಾ ಗ್ರಾಮದ ಅಭಿವೃದ್ಧಿಯೇ ನಮ್ಮ್ ಗುರಿವೆಂದು ನುಡಿದರು.

ಈ ಶ್ರೇಯಸ್ಸು ಕಾಗವಾಡ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಮಂತ ಪಾಟೀಲ್ ಹಾಗೂ ಯುವ ನಾಯಕರಾದ ಶ್ರೀನಿವಾಸ್ ಪಾಟೀಲ ಅವರಿಗೆ ಸಲ್ಲುತ್ತದೆ ಅವರ ಅಭಿವೃದ್ಧಿಕಾರ್ಯಗಳನ್ನು ಗಮನಿಸಿ ಎಲ್ಲರೂ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವುದು ನಮಗೆ ತುಂಬಾ ಸಂತಸ ತಂದಿದೆ ಎಂದು ಮಾಧ್ಯಮದ ಮುಂದೆ ತಮ್ಮ್ ಅಭಿಪ್ರಾಯವನ್ನ ಹಂಚಿಕೊಂಡರು ಮುಖಂಡರಾದ ಶಿವಾನಂದ ಮಜಗನ್ನವರ ಮಾತನಾಡಿ ಮತ ಚಲಾಯಿಸಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನ ಅರ್ಪಿಸಿದರು.

ಇದೆ ಸಂಧರ್ಭದಲ್ಲಿ ಮುಖಂಡರಾದ ಸಿದ್ದರಾಯ ತೇಲಿ, ಅಪ್ಪಣ್ಣ ಮುಗುನ್ನವರ, ಪರಗೊಂಡ ಮಗದುಮ, ಲಕ್ಷ್ಮಣ್ ಮಾದಣ್ಣವರ, ರಾಜು ಚೌಹಾನ್, ಮಹದೇವ ಜಾದವ, ರಾಮಚಂದ್ರ ಚೌಹಾನ್, ಶಂಕರ್ ಕಾಂಬಳೆ, ಅಮರ್ ಕಾಂಬಳೆ, ಸದಾಶಿವ ಮಗದುಮ ಇನ್ನಿತರರು ಗ್ರಾಮಸ್ಥರು ಉಪಸ್ಥಿತರಿದ್ದರು.


Leave a Reply