Belagavi

ಬೆಳಗಾವಿ ಪೊಲೀಸರ ಕಾರ್ಯ ಶ್ಲಾಘನೀಯ: ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ


ಬೆಳಗಾವಿಯು ಒಂದು ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ಅಪರಾಧಗಳನ್ನು ಹತೋಟಿಗೆ ತರುವಲ್ಲಿ ಮತ್ತು ಗಡಿ ಸಮಸ್ಯೆ ನಿಭಾಯಿಸುವಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಹೇಳಿದರು.

ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್ ಕಮಿಷ್ಟರೇಟ್ ಬೆಳಗಾವಿ ನಗರದ ಮೂರು ದಿನಗಳ ಕಾಲ ನಡೆಯಲಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಕೂಟ ವ್ಯವಸ್ಥತವಾಗಿ ಆಯೋಜಿಸಲಾಗಿದ್ದು ಪೊಲೀಸರು ತಮ್ಮ ಸಮವಸ್ತ್ರದ ಬಣ್ಣ ಬಣ್ಣದ ಬಟ್ಟೆಯೊಂದಿಗೆ ಕ್ರೀಡಾಕೂಟದಲ್ಲಿ ಭಾಗಿಯಾಗಿರುವುದು ಸಂತೋಷದ ಸಂಗತಿ ಎಂದರು

ಬೆಂಗಳೂರು ಬಿಟ್ಟರೆ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರ ಜವಾಬ್ಯಾರಿ ಹೆಚ್ಚಿದೆ. ಗಡಿಭಾಗದ ಪೊಲೀಸರು ಒಳ್ಳೆಯ ರೀತಿಯ ಕೆಲಸ ಮಾಡಿ ಛಾಪು ಮೂಡಿಸಿ ಮಂಚೂಣಿಯಲ್ಲಿ ನಿಲ್ಲುತ್ತದೆ ಕೆಲಸದ ಒತ್ತಡವನ್ನು ಕ್ರೀಡಾಕೂಟದಲ್ಲಿ ಆಯೋಜನೆ ಮಾಡುವುದರಿಂದ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಬೆಳಗಾವಿ ಜಿಲ್ಲೆ ವಾಕ್ಸಿನೇಷನ್ ನಲ್ಲಿ ರಾಜ್ಯದಲ್ಲಿ 99 ಪ್ರತಿಶತ ಮಾಡಿ ಮೊದಲ ಸ್ನಾನ ಪಡೆದಿತ್ತು. ಅದೇ ರೀತಿ ಎರಡನೇ ಡೋಸ್ ನಲ್ಲಿ 83 ಪ್ರತಿಶತ ಇತ್ತು. 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವಲ್ಲಿಯೂ ನಮ್ಮ ಜಿಲ್ಲೆ ಯಶಸ್ಮಿಯಾಗಿದೆ ಎಂದ ಅವರು, ಪೊಲೀಸ್ ಇಲಾಖೆಯ ಸಹೋಗದಲ್ಲಿ ಕೋವಿಡ್ ಮೂರನೇ ಅಲೆಯನ್ನು ತಡೆಯಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.


Leave a Reply