Belagavi

ಬೆಳಗಾವಿಯಲ್ಲಿ ಡಿ.ಕೆ ಸುರೇಶ ವಿರುದ್ಧ ಸಚಿವ ಅಶ್ವತ್ ನಾರಾಯಣ ವಾಗ್ದಾಳಿ


ಬೆಳಗಾವಿ: ಡಿ.ಕೆ.ಬ್ರದರ್ಸ್ ಕೇವಲ ತಮ್ಮ ವರ್ಚಸ್ಸು, ಪ್ರತಿಷ್ಟೆ, ಸ್ವಾರ್ಥಕ್ಕಾಗಿ ರಾಮನಗರದಲ್ಲಿ ಅವರಿಗೆ ಮನ ಬಂದಂತೆ ನಡೆದುಕೊಂಡು ಬಂದಿದ್ದಾರೆ. ಎನು ಮಾಡಿದ್ರೂ ನಾವು ಜಯಸಿಕೊಳ್ಳುತ್ತೇವೆ ಅನ್ನೋ ರೀತಿ ನಡೆದುಕೊಂಡಿದ್ಯಾರೆ. ನಮ್ಮ ತಾಳ್ಮೆಯನ್ನು ಮೀರಿಸಿದ್ದಕ್ಕಾಗಿ ಅವರಿಗೆ ಸಂದೇಶ ಕೊಡಬೇಕಾಗಿತ್ತು ಆ ಕೆಲಸ ಮೊನ್ನೆಯ ಸಭೆಯಲ್ಲಿ ನಾವು ಮಾಡಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಅವರು ಡಿ.ಕೆ ಸುರೇಶ ಅವರನ್ನ ಕುಟುಕಿದ್ದಾರೆ.

ಬುಧವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ ಮತ್ತು ಅವರ ನಡುವಿನ ಗಲಾಟೆಯ ಬಗ್ಗೆ ಪ್ರತಿಕ್ರಯಿಸಿ ಡಿ.ಕೆ.ಬ್ರದರ್ಸ್ ಕೇವಲ ಪ್ರತಿಷ್ಟೆಗಾಗಿ  ಬದುಕಿ ಬಾಳುತ್ತಿದ್ದಂತವರು. ಇದು ಸಾಕಾಗಿದೆ, ನಿಮಗೆ ಸಾಧನೆ ಎನಾದರೂ ಇದ್ದರೆ ಕೆಲಸದಲ್ಲಿ ತೋರಿಸಬೇಕು. ನೀವು ಏನಾದರೂ ಕೆಲಸ ಮಾಡಿದ್ದೀರಿ ಅಂತಾ ಕೇಳಿದ್ರೆ ಅವರಿಂದ ಉತ್ತರವಿಲ್ಲ ಎಂದ ಅವರು, ಆ ಭಾಗದ ಜನರ ಧ್ವನಿಯಾಗಿ ಈಗಾಗಲೇ ಕೆಲಸ ಮಾಡುತ್ತಿದ್ದೇವೆ. ನಾವು ಈ ರೀತಿ ಕೆಲಸ ಮಾಡಿದ್ದೇವೆ ನೀವೆನೂ ಮಾಡಿದ್ದೀರಿ ಹೇಳರಪಪ್ಪಾ. ಇಲ್ಲಿ ಬಂದು ಗಲಾಟೆ ಮಾಡುವುದಲ್ಲ ಪುಂಡಾಟಿಕೆ ಮಾಡುವುದಿಲ್ಲ ಅಂತಾ ಕೇಳಿದೀವಿ. ಇದನ್ನ ಸಹಿಸಿಕೊಳ್ಳಲು ಅವರಿಗೆ ಆಗಲಿಲ್ಲ ಎಂದರು.

ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಮಾತನಾಡಿದ ಅವರು, ಎನೇನು ನಿರ್ಬಂಧ ಅವರ ಮೇಲೆ ಇದೆ ನೋಡೋಣ. ಈ ಕಾರ್ಯಕ್ರಮಗಳು ಒಟ್ಯಾರೆಯಾಗಿ ಸಮಾಜಕ್ಕೆ ಇವೆ ಎಂದರು.

ಓಮಿಕ್ರಾನ ನಿಯಂತ್ರಣದ ಬಗದಗೆ  ಪ್ರತಿಕ್ರಯಿಸಿ ಕೊವಿಡ್ ನಿಯಂತ್ರಣಕ್ಕೆ ಈಗಾಗಲೇ ರಾಜ್ಯ ಸರಕಾರ ಕ್ರಮಗಳನ್ನು ಕೈಗೊಂಡಿದ್ದು ಈಗ ಒಂಬತ್ತೇ ತರಗತಿ ವರೆಗೆ ಶಾಲೆಗಳ ಬಂದ್ ಮಾಡಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಎನನ್ನ ಕ್ರಮ ವಹಿಸಬೇಕು ಅದನ್ನ ಸರ್ಕಾರ ವಹಿಸುತ್ತೆ ಎಂದರು.


Leave a Reply