Belagavi

ಬೆಳಗಾವಿ ಜ.7 ರಿಂದ ಜ.16 ರವರಿಗೆ ಮೈಸೂರ್ ಸ್ಯಾಂಡಲ್ ಸಾಬೂನು ಮೇಳ


ಬೆಳಗಾವಿ: ಕರ್ನಾಟಕ ಸರ್ಕಾರದ ಉದ್ಯಮವಾದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ವತಿಯಿಂದ ನಗರದ ಕಾಲೇಜು ರಸ್ತೆಯ ಮಹಾತ್ಮಾ ಗಾಂಧಿ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ರಿಯಾಯತಿ ದರದಲ್ಲಿ ಉತ್ಪನ್ನಗಳ ಪ್ರರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಶುದ್ಧ ನೈಸರ್ಗಿಕ ಗುಣಮಟ್ಟದ ಉತ್ಪನ್ನಗಳ ಮಾರಾಟ ಮೇಳ ಜನವರಿ 7 ರಿಂದ ಜ.16 ರವರೆಗೆ ನಡೆಯಲಿದ್ದು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಉದ್ಘಾಟಿಸಲಿದ್ದಾರೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಮಂಗಳ ಅಂಗಡಿ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಹಾಗೂ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸಲಿದ್ದಾರೆ.

ಚನ್ನಗಿರಿ ವಿಧಾನಸಭಾ ಕ್ಷೇತ್ರ ಶಾಸಕರು ಹಾಗೂ ಕೆಎಸ್, ಡಿಎಲ್ ಕೆ. ಮಾಡಳ್ ವಿರೂಪಾಕ್ಷಪ್ಪ, ಕೆಎಸ್, ಡಿಎಲ್ ಪ್ರಧಾನ ವ್ಯವಸ್ಥಾಪಕರಾದ ಸಿ.ಎಂ ಸುವರ್ಣ ಕುಮಾರ್, ಬೆಂಗಳೂರು ಕೆಎಸ್, ಡಿಎಲ್ಶಾಖಾ ವ್ಯಸ್ಥಾಪಕರಾದ ನಾರಾಯಣಸ್ವಾಮಿ.ಸಿ ಉಪಸ್ಥಿತರಿರುವರು ಎಂದು ಕೆಎಸ್, ಡಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಬಿ. ಶಿರೂರು ತಿಳಿಸಿದ್ದಾರೆ.


Leave a Reply