Koppal

ಚಿಕ್ಕಜಂತಕಲ್ ಇಂದ್ರ ಪವರ್ ಎನರ್ಜಿಸ್ ಲಿಮಿಟೆಡ್ ವಿರುದ್ಧ ಕಾರ್ಮಿಕರಿಂದ ಶಾಂತಿಯುತ ಪ್ರತಿಭಟನೆ


ಗಂಗಾವತಿ:-ಚಿಕ್ಕಜಂತಕಲ್ ಇಂದ್ರ ಪವರ್ ಎನರ್ಜಿಸ್ ಲಿಮಿಟೆಡ್ ಕೆಲಸ ಮಾಡುವ ಕಾರ್ಮಿಕರನ್ನು ಯಾವುದೆ ಸೂಚನೆ ಇಲ್ಲದೆ ಕಾರ್ಮಿಕರನ್ನು ಏಕಾಏಕಿ ಕಾರ್ಮಿಕರನ್ನ ಕೆಲಸದಿಂದ ಹೊರ ಹಾಕಿದ ಕಾರಣ 56 ಕಾರ್ಮಿಕ ಕುಟುಂಬದ ಬದುಕು ಬೀದಿ ಪಾಲಗಿದೆ. ಕಾರ್ಖಾನೆ ಮಾಲಿಕರ ಹತ್ತಿರ ಎಷ್ಟೇ ಅಳಲು ತೋಡಿಕೊಂಡರು. ಕಾರ್ಖಾನೆ ಮಾಲಿಕರು ಉಢಾಪೆ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ. ಆದರೆ ಕಾರ್ಮಿಕರು ನಮಗೆ ಕೆಲಸ ತೆಗೆಯುವದಿದ್ದರೆ ಮೂರು ತಿಂಗಳು ಮುಂಚಿತವಾಗಿ ನಮಗೆ ನೋಟಿಸ್ ನೀಡಬೇಕಿತ್ತು ಮತ್ತು 55 ಜನ ಕಾರ್ಮಿಕರಲ್ಲಿ 22 ಪಿ ಎಫ್ ರಹಿತ ಇನ್ನು 23 ಕಾರ್ಮಿಕರಿಗೆ ಮಾತ್ರ ಪಿ ಎಫ್ ಇರುತ್ತದೆ. ಆದರೆ ಯಾವುದೆ ನೋಟಿಸ್ ಕೊಡದೆ ನಮ್ಮನೆಲ್ಲ ಕೆಲಸದಿಂದ ತೆಗೆದು ನಮ್ಮ 55 ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿದೆ. ನಾವು 18 ವರ್ಷದಿಂದಲೂ ನಮ್ಮೆಲ್ಲರ ಕುಟುಂಬ ಈ ಕಾರ್ಖಾನೆ ಮೇಲೆ ಅವಲಂಬಿತವಾಗಿದೆ ಆದರೆ ಈಗ ಏಕಾಏಕಿ ನಮ್ಮನ್ನ ಕೆಲಸದಿಂದ ತೆಗೆದು ನಮ್ಮ ಕುಟುಂಬಗಳು ಬೀದಿ ಪಾಲಗಿದೆ ನಮಗೆ ಮೂರು ತಿಂಗಳ ಸಂಬಳ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಕಾರರು ಮಾಧ್ಯಮದವರಿಗೆ ತಿಳಿಸಿದರು . ಈ ಸಂಧರ್ಭದಲ್ಲಿ ಶ್ರೀನಿವಾಸ್ ಸುಧಾಕರ್ ರೆಡ್ಡಿ. ಎಂ. ಬಸವರಾಜ್ ಜಿ .ಮಂಜುನಾಥ್ .ರಂಗನಾಥ್ ನರೇಶ್. ನೀಲಕಂಠ . ಜಗದೀಶ್ ಮಾಂತೇಶ್. ಶಿವು ಉಪ್ಪಾರ್ ಲಿಂಗಪ್ಪ. ಲಕ್ಷ್ಮಣ. ಇನ್ನೂ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು

ವರದಿ
(ಹನುಮೇಶ ಬಟಾರಿ ಗಂಗಾವತಿ)


Leave a Reply