Belagavi

ಅನಧಿಕೃತ ಮಾರುಕಟ್ಟೆ ರದ್ದುಪಡಿಸುವಂತೆ ಸರಕ ರಕ್ಕೆ ಪತ್ರ ಬರೆಯುತ್ತೇವೆ: ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಡಾ, ಕೋಡಿಗೌಡ


ಬೆಳಗಾವಿ: ಗಾಂಧಿನಗರದ ರಾಷ್ಟಿಯ ಹೆದ್ದಾರಿಯ ಪಕ್ಕದಲ್ಲಿ ಉದ್ಘಾಟನೆಗೊಂಡಿರುವ ಜೈ ಕಿಸಾನ್ ಭಾಜಿ ಮಾರ್ಕೇಟ್ ಅನಧಿಕೃತವಾಗಿದ್ದು, ರೈತರ ಹಾಗೂ ಎಪಿಎಂಸಿಯಲ್ಲಿ ವ್ಯಾಪಾರ ನಡೆಸುವವರ ಹಿತ ದೃಷ್ಠಿಯಿಂದ ಅನಧಿಕೃತವಾಗಿರುವ ಭಾಜಿ ಮಾರ್ಕೇಟ್ ಲೈಸನ್ಸ್ ರದ್ದು ಪಡಿಸುವಂತೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಬೆಳಗಾವಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಡಾ, ಕೋಡಿಗೌಡ ಹೇಳಿದರು.

ಬುಧವಾರ ನಗರದ ಕೃಷಿ ಉತ್ಪನ ಮಾರುಕಟ್ಟೆಯ ಸಮಿತಿಯ ಅಧ್ಯಕ್ಷರ ಕೊಠಡಿಯಲ್ಲಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ರೈತರು ಹಾಗೂ ವ್ಯಾಪಾರಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಅಧಿಕೃತವಾಗಿ ಸರಕಾರದಿಂದ ಇರುವುದು ಒಂದೇ ಮಾರುಕಟ್ಟೆ ಅದು ಬೆಳಗಾವಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ. ಜೈ ಕಿಸಾನ್ ಭಾಜಿ ಮಾರ್ಕೇಟ್ ಅನಧಿಕೃತವಾಗಿದೆ ಎಂದು ಸರಕಾರದ ಗಮನಕ್ಕೆ ಹಾಗೂ ಸಂಬAಧಿಸಿದ ಸಚಿವರ ಗಮನಕ್ಕೆ ತಂದಿದ್ದೇವೆ. ಅನಧಿಕೃತವಾಗಿ ನಿರ್ಮಾಣ ಮಾಡಿರುವ ಖಾಸತಿ ತರಕಾರಿ ಮಾರುಕಟ್ಟೆಯ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೀಘ್ರದಲ್ಲಿಯೇ ಜಿಲ್ಲಾಮಟ್ಟದ ಸಮಿತಿಯ ಸಭೆ ಕರೆದು ಅದನ್ನು ಪರಿಶೀಲನೆ ಮಾಡಿ ಅನಧಿಕೃತವಾಗಿ ನಿರ್ಮಾಣವಾಗಿರುವ ಜೈ ಕಿಸಾನ್ ಭಾಜಿ ಮಾರ್ಕೇಟ್ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಅಲ್ಲದೆ, ಅದರ ಲೈಸನ್ಸ್ ರದ್ದು ಮಾಡುವಂತೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದ ಅವರು, ರೈತರು ಯಾವುದೇ ಕಾರಣಕ್ಕೂ ಸರಕಾರಿ ಎಪಿಎಂಸಿ ಬಿಟ್ಟು ಖಾಸಗಿ ಮಾರುಕಟ್ಟೆಗೆ ಹೋಗದಂತೆ ಮನವಿ ಮಾಡಿಕೊಂಡರು.
ಜೈ ಕಿಸಾನ್ ಭಾಜಿ ಮಾರ್ಕೇಟ್‌ಗೆ ಲೈಸನ್ಸ್ ನೀಡಿರುವುದು ಸರಕಾರದಿಂದ ನೀಡಿರುವುದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು ಆ ಕಟ್ಟಡವನ್ನು ಪರಿಶೀಲನೆ ಮಾಡುತ್ತಾರೆ. ಅನಧಿಕೃತವಾಗಿದೆ ಲೈಸನ್ಸ್ ನೀಡಿದರವರೇ ಅದನ್ನು ರದ್ದು ಮಾಡಬೇಕಿರುವುದರಿಂದ ಲೈಸನ್ಸ್ ರದ್ದು ಮಾಡುವಂತೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಇದಕ್ಕೂ ಮುನ್ನ ನಗರದ ಅನಧಿಕೃತ ಮಾರುಕಟ್ಟೆಯನ್ನು ಅಕ್ರಮವಾಗಿ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ ಜೈ ಕಿಸಾನ್ ಭಾಜಿ ಮಾರ್ಕೇಟ್ ನಲ್ಲಿ ರೈತರು ತಂದ ತರಕಾರಿಗಳಿಗೆ ಸೂಕ್ತ ಬೆಲೆ ನೀಡದೆ ರೈತರು ತುಂಬಿಕೊAಡು ಬಂದಿದ್ದ ತರಕಾರಿಯನ್ನು ಒತ್ತಾಯ ಪೂರ್ವಕವಾಗಿ ಹಿಡಿದಿಟ್ಟುಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ ಕೂಡಲೇ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಜೈ ಕಿಸಾನ್ ಮಾರುಕಟ್ಟೆಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬೆಳಗಾವಿ ನಗರದಲ್ಲಿ ಬೃಹತ್ ಆಕಾರದ ಸರಕಾರಿ ಎಪಿಎಂಸಿ ಇದ್ದರೂ ಸರಕಾರಿ ಮಾರುಕಟ್ಟೆಗೆ ರೈತರು ಹೋಗಬೇಡಿ. ಒತ್ತಾಯ ಪೂರ್ವಕವಾಗಿ ರೈತರ ತರಕಾರಿಯನ್ನು ತಮಗೆ ಬೇಕಾದ ರೀತಿಯಲ್ಲಿ ದರ ನಿಗದಿ ಮಾಡುತ್ತಿದ್ದಾರೆ. ಇದು ಖಂಡನೀಯ ಅವರ ಖಾಸಗಿ ತರಕಾರಿ ಮಾರುಕಟ್ಟೆ ಲೈಸನ್ ರದ್ದು ಮಾಡಬೇಕು. ರೈತರು ಹಾಗೂ ವ್ಯಾಪಾರಿಗಳ ಮೇಲೆ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಂಡು ಸರಕಾರದ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಆಗ್ರಹಿಸಿದರು.

ಸರಕಾರದಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ಬಂಡವಾಳ ಹೂಡಿಕೆ ಮಾಡಿ ಸರಕಾರದ ಅಧಿನದಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲ ರಾಜಕಾರಣಿಗಳ ಕುಮ್ಮಕ್ಕಿನಿಂದ ಖಾಸಗಿ ತರಕಾರಿ ಉದ್ಘಾಟನೆ ಮಾಡಿ ಸರಕಾರಕ್ಕೆನೇಯೆ ಪಂಗನಾಮ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಖಾಸಗಿ ತರಕಾರಿ ಮಾರುಕಟ್ಟೆ ಲೈಸನ್ಸ್ ನಿಷೇಧ ಮಾಡಬೇಕೆಂದು ಒತ್ತಾಯಿಸಿದರು.

ಎಪಿಎಂಸಿ ಅಧಿಕಾರಿ ಮಹಾಂತೇಶ ಪಾಟೀಲ, ರಾಜಕುಮಾರ ಟೋಪಣ್ಣವರ, ವ್ಯಾಪರಸ್ಥರಾದ ಸತೀಶ, ವಿನೋದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply