Belagavi

ಶಾಸಕ ಅನಿಲ ಬೆನಕೆಯವರಿಂದ ಹಳೆಯ ಮಹಾನಗರ ಪಾಲಿಕೆ ಕಟ್ಟಡ ಪರಿಶೀಲನೆ


ಬೆಳಗಾವಿ ೦೫ : ದಿ ೦೫.ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಇಬ್ಬರು ನಗರ ಸೇವಕರೊಂದಿಗೆ ಹಳೆಯ ಮಹಾನಗರ ಪಾಲಿಕೆ ಕಟ್ಟಡದ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಶಾಸಕರು ಬೆಳಗಾವಿಯಲ್ಲಿ ಹೊಸ ಮಹಾನಗರ ಪಾಲಿಕೆ ಕಟ್ಟಡದ ನಿರ್ಮಾಣದ ನಂತರ ಹಳೆಯ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ತಹಶೀಲ್ದಾರ ಕಚೇರಿ ಹೊರತು ಪಡಿಸಿ ಯಾವುದೇ ಕಚೇರಿ ಇಲ್ಲದಿರುವುದರಿಂದ ಹಾಗೂ ಪ್ರತಿಶತ ೭೫ ರಷ್ಟು ಕಟ್ಟಡದ ಭಾಗ ಸದುಪಯೋಗ ಪಡಿಸಿಕೊಳ್ಳದೆ ಇರುವುದರಿಂದ ನಾಶವಾಗುತ್ತಿರುವುದರೊಂದಿಗೆ ಇದು ಅನೇಕ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಆದ್ದರಿಂದ ಇದರ ಬಗ್ಗೆ ಗಮನಹರಿಸಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನಗರ ಸೇವಕರೊಂದಿಗೆ ಇಂದು ಪರಿಶೀಲನೆ ನಡೆಸಿ ಬಾಕಿ ಉಳಿದ ಕಟ್ಟಡದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವ್ಯಾಯಾಮ ಶಾಲೆಗಳನ್ನು, ಮಕ್ಕಳಿಗೆ ವಿದ್ಯಾಭ್ಯಾಸದ ಸಲುವಾಗಿ ಅಂಗನವಾಡಿ ಕಟ್ಟಡಗಳನ್ನು ಹಾಗೂ ಇನ್ನಿತರೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಟ್ಟಡವನ್ನು ಸದುಪಯೋಗ ಪಡಿಸಿಕೊಂಡು ಸ್ವಚ್ಚವಾಗಿ ಇಡಲಾಗುವುದು ಎಂದು ತಿಳಿಸಿದರಲ್ಲದೆ ಕಟ್ಟಡಗಳಿಗೆ ಬೇಕಾಗುವ ಎಲ್ಲ ರೀತಿಯ ಕಟ್ಟಡ ಪರವಾನಿಗೆಯನ್ನು ಆಯುಕ್ತರು ನೀಡುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆ ಆಯುಕ್ತರು, ನಗರ ಸೇವಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply