Belagavi

ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ


ಖಾನಾಪೂರ : ಪ್ರತಿಯೊಬ್ಬ ಕೂಲಿಕಾರರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕರಾದ ದೇವರಾಜ ಎಂಜಿ ಹೇಳಿದರು.

ಮಂಗಳವಾರ ತಾಲೂಕಿನ ಶಿಂಧೋಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು  ಈಗಿನ ಸಂದರ್ಭದಲ್ಲಿ ಯಾರು ಕೂಡಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಗ್ರಾಮೀಣ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರ ಆರೋಗ್ಯದ ಕಾಳಜಿ ವಹಿಸುವುದು ಕೂಡ ನರೇಗಾ ಯೋಜನೆಯ ಭಾಗವಾಗಿದೆ ಎಂದು ಹೇಳಿದರು.

ಬಳಿಕ ದಂತ ವೈದ್ಯಾಧಿಕಾರಿಗಳು ಪ್ರದೀಪ ಸೋಮನ್ನವರ ಮಾತನಾಡಿ ಎಲ್ಲಾ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಕಾಳಜಿ ವಹಿಸಿ, ಉತ್ತಮ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಜೊತೆಗೆ ನೆಮ್ಮದಿಯ ಜೀವನಕ್ಕೆ ನಾವು ಉತ್ತಮ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರತೀಕ್ಷಾ ಪು ಕರ್ಲೆಕರ, ಗ್ರಾಮ ಪಂಚಾಯತಿ ಸದಸ್ಯರಾದ  ಗಣಪತಿ ಸುತಾರ, ರಾಜೇಶ ಪಾಟೀಲ, ಶೋಭಾ ಮಾದರ, ಶಂಕರ ಗಾವಡೆ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಬ. ಮೋಮಿನ, ಡಾ.ಪ್ರಗತಿ ವಿನಾಯಕ ವೈದ್ಯಾಧಿಕಾರಿಗಳು, ಡಾ.ರಾಜೇಶ್ವರಿ ಬಡಸಗೋಳ ಮತ್ತು ನೇತ್ರಾಧಿಕಾರಿ ಸಫಿನಾಜ್ ಬಾಳೆಕುಂದ್ರಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಮನೋಜ ಕಾಂಬಳೆ, ಸರಸ್ವತಿ ಮಾಶಾಳ, ದೀಲಿಪ ಮಲನಾಯಕ, ಶೋಭಾ ನಾಯ್ಕ, ಸುಧಾ ಕಮ್ಮಾರ, ಮನೋಜ ಕಾಂಬಳೆ ಹಾಗೂ ಅಂಗನವಾಡಿ-ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಕೂಲಿಕಾರರು ಹಾಜರಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಭಾಕರ ಎನ್ ಭಟ್ ಸ್ವಾಗತಿಸಿದರು. ಡಿಇಓ ಪ್ರಕಾಶ ವಂದಸಿದರು.


Leave a Reply