Belagavi

ಬೆಳಗಾವಿಗೆ ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ನೇಮಕ


ಬೆಳಗಾವಿ : ಬೆಳಗಾವಿ ಪೊಲೀಸ್ ಆಯುಕ್ತ‌ ಡಾ. ಕೆ.ತ್ಯಾಗರಾಜನ್ ವರ್ಗಾವಣೆಯ ಬೆನ್ನಲ್ಲೇ ಡಿಸಿಪಿ ಡಾ.ವಿಕ್ರಮ್ ಅಮಟೆ ಅವರನ್ನು ಸರಕಾರ ವರ್ಗಾವಣೆಗೊಳಿಸಿ ಬೆಳಗಾವಿಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ರವೀಂದ್ರ ಗಡಾದಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ನಗರದಲ್ಲಿ‌ ಕಾನೂನು ಸುವ್ಯವಸ್ಥೆ ಕಾಪಾಡಿ, ಮಟ್ಕಾ ಬುಕ್ಕಿಗಳನ್ನು ಹೆಡೆಮುರಿ ಕಟ್ಟಿ ಬಂದು ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಡಾ. ವಿಕ್ರಮ್ ಆಮಟೆ ಅವರನ್ನು ಸರಕಾರ ವರ್ಗಾವಣೆಗೊಳಿಸಿದ್ದು, ಅವರ ಜಾಗಕಕ್ಕೆ ಸದ್ಯ ಹೆಸ್ಕಾಂ ಎಸ್ಪಿಯಾಗಿರುವ ರವೀಂದ್ರ ಗಡಾದಿ ಅವರನ್ನು ನೇಮಕ‌ ಮಾಡಿದೆ. ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಇವರು ಅವರಿಗೆ ಸರಕಾರ ಬೆಳಗಾವಿ ಕಾನೂನು ಸುವ್ಯವಸ್ಥೆಯ ಡಿಸಿಪಿಯಾಗಿ ನೇಮಕ ಮಾಡಿದೆ.


Leave a Reply