Belagavi

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು : ಜಿಲ್ಲಾಧಿಕಾರಿ ಆದೇಶ


ಬೆಳಗಾವಿ, ಜ.೦೬: ಕೋವಿಡ್-೧೯ರ ರೂಪಾಂತರಿ ವೈರಸ್ “ಓಮಿಕ್ರಾನ” ಪ್ರಸರಣವನ್ನು ತಡೆಗಟ್ಟಲು ಜ.೦೫ ರಂದು ನಡೆದ ವಿಡಿಯೋ ಸಂವಾದದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೀಡಿದ ನಿರ್ದೇಶನಗಳನ್ವಯ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದ್ದಾರೆ.

ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೋವಿಡ್-೧೯ ಹರಡುವಿಕೆಯನ್ನು ತಡೆಗಟ್ಟಲು ಉಲ್ಲೇಖಿತ (೧)ರ ಮಾರ್ಗಸೂಚಿಯ ಕ್ರ.ಸಂ:೨ ಮತ್ತು ೦೩ ಕ್ಕೆ ಸಂಬAಧಪಟ್ಟAತೆ ಅಗತ್ಯತೆಗನುಗುಣವಾಗಿ ಸೂಕ್ತ ಕ್ರಮ ವಹಿಸುವುದು, ಹಾಗೂ ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ವಸತಿ ನಿಲಯಗಳನ್ನು ವಶಕ್ಕೆ ಪಡೆದು ಅವುಗಳನ್ನು ಕೋವಿಡ್ ಕೇರ್ ಸೆಂಟರಗಳಾಗಿ ಬಳಸಲು ಕ್ರಮವಹಿಸುವುದು. ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿಗಳಿಗೆ ಅವಶ್ಯಕ ಪಾಸ್ ಗಳನ್ನು ನೀಡಲು ಕ್ರಮ ವಹಿಸುವುದು.

 

ಪೋಲಿಸ್ ಆಯುಕ್ತರು, ಬೆಳಗಾವಿ ನಗರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಬೆಳಗಾವಿ, ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ, ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಉಲ್ಲೇಖಿತ(೧)ರ ಮಾರ್ಗಸೂಚಿಯ ಕ್ರಮಸಂಖ್ಯೆ: ೧೦, ೧೧, ೧೨, ೧೩, ೧೪ ಮತ್ತು ೧೫ಗಳಲ್ಲಿ ನೀಡಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು, ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಸಲ್ಲಿಸುವುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ, ಬೆಳಗಾವಿ ಇವರು ಕೋವಿಡ್ ಪರೀಕ್ಷೆಯನ್ನು ತೀವ್ರಗೊಳಿಸುವುದು ಹಾಗೂ ಅಗತ್ಯ ಬೆಡ್ ವ್ಯವಸ್ಥೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳುವುದು, ವಿಶೇಷವಾಗಿ ಮಕ್ಕಳ ಆರೈಕೆಯ ಬಗ್ಗೆ ಗಮನಹರಿಸುವುದು.

ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ, ಬೆಳಗಾವಿ ಇವರು ಕೋವಿಡ್-೧೯ ಸೋಂಕಿತ ವ್ಯಕ್ತಿಯ ಸಂಪರ್ಕ ಪತ್ತೆ ಹಚ್ಚುವಿಕೆ, ಕ್ಲಿನಿಕಲ್ ಚಿಕಿತ್ಸೆ, ಬೆಡ್ ಹಂಚುವಿಕೆ, ಕೋವಿಡ್ ಕೇರ್ ಸೆಂಟರ್ ಮತ್ತು ಹೋಮ್ ಐಸೋಲೇಷನ್‌ಗಳಿಗಿರುವ ಶಿಷ್ಟಾಚಾರಗಳನ್ನು ಅನುಸರಿಸಿ, ಅಂಕಿ ಅಂಶಗಳ ವಿಶ್ಲೇಷಣೆಯೊಂದಿಗೆ ವರದಿ ಸಲ್ಲಿಸುವುದು.

ಅಗತ್ಯ ಸೇವೆಗಳಲ್ಲಿ ತೊಡಗಿರುವ ಎಲ್ಲ ಸಿಬ್ಬಂದಿಗಳ ರಜೆಗಳನ್ನು ಕಡ್ಡಾಯವಾಗಿ ಒಬ್ಬ ಹಿರಿಯ ಅಧಿಕಾರಿಯು ಮೇಲ್ವಿಚಾರಣೆ ಮಾಡುವುದು. ಉಲ್ಲೇಖಿತ (೧)ರ ಮಾರ್ಗಸೂಚಿಯಡಿಯಲ್ಲಿ ವಾರಾಂತ್ಯದ ಕರ್ಫ್ಯೂಗಾಗಿ ನೀಡಲಾದ ಸೂಚನೆಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.


Leave a Reply