Belagavi

ಸವದತ್ತಿ ಯಲ್ಲಮ್ಮದೇವಿ ಹುಂಡಿಗೆ ಕೋಟಿ ಕೋಟಿ ಕಾಣಿಕೆ


ಸವದತ್ತಿ : ಜಿಲ್ಲೆಯ ಸವದತ್ತಿಯ ಸುಕ್ಷೇತ್ರ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಗುರುವಾರ ಜರುಗಿತು.ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಸ್ಥಾನ ಹಾಗೂ ಸವದತ್ತಿ ಪೊಲೀಸ್ ಠಾಣೆ ಅಧಿಕಾರಿಗಳ ಸಮ್ಮುಖದಲ್ಲಿ ಹಣ ಎಣಿಸಲಾಗಿದ್ದು, ಕೇವಲ 1.5 ತಿಂಗಳಲ್ಲಿ ಯಲ್ಲಮ್ಮದೇವಿ ಹುಂಡಿಗೆ 1.18 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ದೇಶದ ನಾನಾ ಕಡೆಗಳಿಂದ ಭಕ್ತರು ಏಳುಕೊಳ್ಳದ ಯಲ್ಲಮ್ಮನ ಸಾನಿಧ್ಯಕ್ಕೆ ಬರುತ್ತಾರೆ. ಭಕ್ತಾಧಿಗಳು ತಮ್ಮ ಇಷ್ಟಾರ್ಥ ಈಡೇರಿಸಿದ ದೇವಿಗೆ ಕಾಣಿಕೆಯಾಗಿ ಚಿನ್ನ, ಬೆಳ್ಳಿಯ ಆಭರಣ ಹಾಗೂ ನಗದು ರೂಪದಲ್ಲಿ ದೇವಸ್ಥಾನದ ಹುಂಡಿಯಲ್ಲಿ ಹಣ ಹಾಕಿ ಭಕ್ತಿ ಸಮರ್ಪಿಸುತ್ತಾರೆ.


Leave a Reply