Belagavi

ಮೈಸೂರ ಸ್ಯಾಂಡಲ್ ಸೋಪ್ ಭಾರತದ ನಂ.1 ಉತ್ಪನ್ನವಾಗಬೇಕು : ಶಾಸಕ ಅನಿಲ ಬೆನಕೆ


ಬೆಳಗಾವಿ: ಕರ್ನಾಟಕ ಸರ್ಕಾರದ ಉದ್ಯಮವಾದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಉತ್ಪನ್ನಗಳು ಸೇರಿದಂತೆ ಶುದ್ಧ ನೈಸರ್ಗಿಕ ಮೈಸೂರು ಸ್ಯಾಂಡಲ್ ಸೋಪ್ ಭಾರತದ ನಂ. 1 ಉತ್ಪನ್ನವಾಗಬೇಕು ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ತಿಳಿಸಿದರು.

ನಗರದ ಕಾಲೇಜು ರಸ್ತೆಯ ಮಹಾತ್ಮಾ ಗಾಂಧಿ ಭವನದಲ್ಲಿ ಶಕ್ರವಾರ (ಜ.1) ನಡೆದ ಸಾಬೂನು ಮೇಳ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು. ಅತ್ಯುನ್ನತ ಗುಣಮಟ್ಟದ ಮೈಸೂರು ಸ್ಯಾಂಡಲ್ ಸೋಪ್‌ನ್ನು ಅತೀ ಹೆಚ್ಚಾಗಿ ಜನರು ಬಳಕೆ ಮಾಡಬೇಕು. ನೂರು ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರ ಕಂಪನಿಯಾಗಿದೆ. ಮೊದಲ ಬಾರಿಗೆ ಬೆಳಗಾವಿಯಲ್ಲಿ ರಿಯಾಯಿತಿ ದರದಲ್ಲಿ ಸಾಬೂನು ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಉದ್ಯಮವಾದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ವತಿಯಿಂದ ಶುದ್ಧ ನೈಸರ್ಗಿಕ ಶ್ರೀಗಂಧದೆಣ್ಣೆಯುಕ್ತ ಉತ್ಪನ್ನಗಳನ್ನು ತಯಾರಿಸುತ್ತಿದೆ. 917 ಕೋಟಿ ವಹಿವಾಟು ಹಾಗೂ 115 ಕೋಟಿ ನಿವ್ವಳ ಲಾಭ ಗಳಿಸಿದೆ. ಬೆಳಗಾವಿಯಲ್ಲಿ ಅತೀ ಹೆಚ್ಚು ಜನರು ಉತ್ಪನ್ನಗಳನ್ನು ಬಳಕೆ ಮಾಡಲು ಸದ್ಯದಲ್ಲಿಯೇ ನಗರದಲ್ಲಿ ಒಂದು ಮಳಿಗೆಯನ್ನು ಸ್ಥಾಪನೆ ಮಾಡುತ್ತೇವೆ ಎಂದು ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಬಿ. ಶಿರೂರು ತಿಳಿಸಿದರು.

ಕೆ.ಎಸ್.ಡಿ.ಎಲ್ ಪ್ರಧಾನ ವ್ಯವಸ್ಥಾಪಕರಾದ ಸಿ.ಎಂ ಸುವರ್ಣ ಕುಮಾರ್, ಬೆಂಗಳೂರು ಕೆ.ಎಸ್.ಡಿ.ಎಲ್ ಶಾಖೆಯ ವ್ಯಸ್ಥಾಪಕರಾದ ನಾರಾಯಣಸ್ವಾಮಿ, ಕೆ.ಎಸ್.ಡಿ.ಎಲ್ ಲಿಮಿಟೆಡ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.


Leave a Reply