Belagavi

ವಿಕಲಚೇತನರಿಗೆ ರಿಯಾಯಿತಿ ದರದ ಬಸ್ ಪಾಸ್ ನವೀಕರಣಕ್ಕೆ ಅರ್ಜಿ ಆಹ್ವಾನ


ಬೆಳಗಾವಿ: 2022 ರ ಸಾಲಿನ ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳನ್ನು ನವೀಕರಿಸಲು ಅರ್ಜಿ ಆಹ್ವಾನಿಸಲಾಗಿದೆ. 2021 ನೇ ಸಾಲಿನಲ್ಲಿ ಚಾಲ್ತಿ ಬಸ್ ಪಾಸು ಹೊಂದಿರುವ ಆರ್ಹ ವಿಕಲಚೇತನರ ರಿಯಾಯಿತಿ ದರದ ಪಾಸುಗಳನ್ನು ಚಿಕ್ಕೋಡಿ ಸಂಕೇಶ್ವರ ಗೋಕಾಕ, ನಿಪ್ಪಾಣಿ ರಾಯಭಾಗ ಮತ್ತು ಆಧಣಿ ಪಾಸ್ ಕೌಂಟರಗಳಲ್ಲಿ ನವೀಕರಣ ಮಾಡಲಾಗುತ್ತದೆ.

ಜನವರಿ 17 ರಿಂದ ಜ.28 ರ ವರೆಗೂ ಫಲಾನುಭವಿಗಳು 2022ನೇ ಸಾಲಿನ ಪಾಸುಗಳ ನವೀಕರಣ ಮತ್ತು ನೂತನ ಪಾಸುಗಳಿಗೆ 660 ರೂ. ನಗದು ರೂಪದಲ್ಲಿ ಅಥವಾ ಡಿ.ಡಿ ರೂಪದಲ್ಲಿ ಶುಲ್ಕವನ್ನು ಪಾವತಿಸಿ ವಿಕಲಚೇತನರ ಬಸ್ ಪಾಸ್ ನವೀಕರಿಸಿಕೊಳ್ಳಬಹುದು.

ಸೇವಾ ಸಿಂಧುವಿನಲ್ಲಿ ಅಜೀಯನ್ನು ಸಲ್ಲಿಸಿದಲ್ಲಿ ಮಾತ್ರ ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳನ್ನು ವಿತರಿಸಲಾಗುವುದು. ಅರ್ಜಿಯನ್ನು https://sevasindhu.karnataka.gov.in ನಲ್ಲಿ ನಮೂದಿಸಿರಬೇಕು. ಏಕಲಚೇತನರ ರಿಯಾಯಿತಿ ಬಸ್ ಪಾಸ್ ಪಡೆಯಲು ದೂರವಾಣಿಯುಳ್ಳ ಆಧಾರಕಾರ್ಡ್ ಕಡ್ಡಾಯವಾಗಿರುತ್ತದೆ. ತಪ್ಪಿದಲ್ಲಿ ಸೇವಾ ಸಿಂಧುವಿನಿAದ ಓ.ಟಿ.ಪಿ ಬರುವುದಿಲ್ಲ ಒ.ಟಿ.ಪಿ ಬರದೇ ಇದ್ದಲ್ಲಿ ಹಾಕಿದ ಅರ್ಜಿಯನ್ನು ನಮೂದಿಸಲು ಸಾಧ್ಯವಾಗುವುದಿಲ್ಲ. 2021 ರಲ್ಲಿ ವಿತರಿಸಿರುವ ಬಸ್ ಪಾಸ್‌ಗಳನ್ನು ಪೆ.28 ವರೆಗೆ ವಿಸ್ತರಿಸಲಾಗುವುದು. ಅವಧಿಯ ಒಳಗಾಗಿ ಎಲ್ಲ ಫಲಾನುಭವಿಗಳು ತಮ್ಮ ವಾಸುಗಳನ್ನು ನವೀಕರಿಸಿಕೊಳ್ಳಲು ಕೋರಲಾಗಿದೆ. ತದ ನಂತರ ಬಂದ ಪಾಸುಗಳನ್ನು ನವೀಕರಿಸಲಾಗುವುದಿಲ್ಲ.
2022ನೇ ಸಾಲಿನಲ್ಲಿ ಅರ್ಹ ವಿಕಲಚೇತನರಿಗೆ ಹೊಸದಾಗಿ ಪಾಸುಗಳನ್ನು ಜ.17ರಿಂದ ಒದಗಿಸಲಾಗುವುದು. ಪಡೆದುಕೊಳ್ಳಲು ವೈದ್ಯಕೀಯ ಪ್ರಮಾಣ ಪತ್ರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಂದ ದೃಢೀಕರಿಸಿದ ಗುರುತಿನ ಚೀಟಿ, ಅಥವಾ ಯು.ಡಿ.ಆಯ್.ಡಿ ಕಾರ್ಡ್ ನಕಲು ಪ್ರತಿ ಆಧಾರ ಕಾರ್ಡ, 20 ರೂ.ಛಾಪಾ ಕಾಗದ ಮೇಲೆ ಸರಕಾರಿ ನೌಕರಿ/ ಆರೇ ಸರಕಾರಿ ನೌಕರಿ ಮಾಡುತ್ತಿಲ್ಲ. ಎಂಬ ದೃಢೀಕರಣ ಸಲ್ಲಿಸುವುದರೊಂದಿಗೆ ಮೂರು ಇತ್ತೀಚಿನ ಭಾವಚಿತ್ರಗಳನ್ನು ಮತ್ತು ದಾಖಲಾತಿಗಳನ್ನು ಸೇವಾ ಸಿಂಧುವಿನಲ್ಲಿ ಅರ್ಜಿಯನ್ನು ದಾಖಲಿಸಿದ ನಂತರ ವಿಭಾಗೀಯ ಕಛೇರಿ ಚಿಕ್ಕೋಡಿ ಇವರಲ್ಲಿ ಪ್ರತಿ ಬುಧವಾರ, ಹಾಜರಾಗಿ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆಯಬಹುದು.
ತಮ್ಮ ವಾಸಸ್ಥಳದಿಂದ 100 ಕಿ.ಮೀ. ಗರಿಷ್ಠ ಅಂತರದವರೆಗೆ ಸಂಸ್ಥೆಯ ವೇಗದೂತ ಮತ್ತು ಸಾಮಾನ್ಯ ಸಾರಿಗೆ ಬಸ್ಸುಗಳಲ್ಲಿ ಕರ್ನಾಟಕ ರಾಜ್ಯದೊಳಗೆ ಮಾತ್ರ ಪ್ರಯಾಣಿಸಲು ಅವಕಾಶ ಇರುತ್ತದೆ. ಹೊಸದಾಗಿ ಪಾಸು ಪಡೆದುಕೊಳ್ಳಲು ಯಾವುದೇ ಕಾಲಮಿತಿ ಇರುವದಿಲ್ಲ. ವಿಕಲಚೇತನರು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಚಿಕ್ಕೋಡಿ ವಿಭಾಗದ ವಾ.ಕ.ರ.ಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply