Koppal

ಜೀವನಾಸರೆ ಯೋಜನೆ ಕಾರ್ಯಕ್ರಮ


ಕುಷ್ಟಗಿ:-   ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ದೇಶಾದ್ಯಂತ ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಕೋವಿಡ್ ರೋಗಕ್ಕೆ ತುತ್ತಾದ ಕುಟುಂಬಗಳ ಸಹಾಯಕ್ಕಾಗಿ ಜೀವನಾಸರೆ ಯೋಜನೆಯಡಿ ಸಹಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಆ ನಿಟ್ಟಿನಲ್ಲಿ
ಕುಷ್ಟಗಿ ಪಟ್ಟಣದಲ್ಲಿ ಕೂಡಾ ಇಲ್ಲಿನ ತಾಲೂಕಾ ರೆಡ್ ಕ್ರಾಸ್ ಘಟಕ ಸಂಸ್ಥೆಯ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಹೊಲಿಗೆ ಯಂತ್ರಗಳನ್ನು (ರಾಟಿ) ಹಾಗೂ ಕೋವಿಡ್ ವೈರಸ್ ತುತ್ತಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಿರುವ ಕುಟುಂಬಗಳಿಗೆ ತಿಂಗಳಿಗೆ ಆಗುವಷ್ಟು ಆಹಾರ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಾ ವೈದ್ಯಾಧಿಕಾರಿಗಳಾದ ಡಾ. ಕೆ.ಎಸ್ ರೆಡ್ಡಿ, ವೈದ್ಯರಾದ ರವಿಕುಮಾರ್ ದಾನಿ ಹಾಗೂ ವಿಜಯ್ ಕುಮಾರ್ ಬಿರಾದಾರ್ ಮಾತನಾಡಿದರು.

ಇದೆ ಸಂದರ್ಭದಲ್ಲಿ ಕುಷ್ಟಗಿ ರೆಡ್ ಕ್ರಾಸ್ ಘಟಕದ ಉಪಾಧ್ಯಕ್ಷರಾದ ಬಸವರಾಜ್ ವಸ್ತ್ರದ,ಸಹ ಕಾರ್ಯದರ್ಶಿ ಆರ್.ಟಿ ಸುಬಾನಿ, ಸದಸ್ಯರಾದ ಮಾಂತಯ್ಯ ಅರಳೆಲೆಮಠ, ಮಲ್ಲಿಕಾರ್ಜುನ ಬಳಿಗಾರ್, ಅಪ್ಪಣ್ಣ ನವಲೇ, ಬಾಲಾಜಿ ಬಳಿಗಾರ್ ಹಾಗೂ ಇತರರು ಉಪಸ್ಥಿತರಿದ್ದರು.


Leave a Reply