Belagavi

ಗ್ರಾ. ಪಂ ಹಾಗೂ ಪುರಸಬೆ ಚುನಾವಣೆಯಲ್ಲಿ ವಿಜೇತರಾದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ


ಅಥಣಿ: ಮಲಾಬಾದ ಗ್ರಾಮದ ಬಿಜೆಪಿ ಮುಖಂಡರು ಹಾಗೂ ಸುಪ್ರೀಮ್ ಪೋಲ್ಟ್ರಿ ಫಾರ್ಮ್ ಮಾಲೀಕರಾದ “ಮಹಮದ್ ಮುಲ್ಲಾ” ಇವರ ಸ್ವಗ್ರಹದ ಮುಂದೆ ನಿರ್ಮಿಸಿದ ವೇದಿಕೆಯಲ್ಲಿ ಸತ್ಕಾರ ಸಮಾರಂಭ ನೆರವೇರಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಕಮಾಲಸಾಬ ಮಲೀಕಸಾಬ ಮುಲ್ಲಾ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರಾದ “ಸೀದರಾಯ ತೇಲಿ”  ಬೆಜೆಪಿ ಯುವ ಮುಖಂಡರಾದ ಪ್ರತಾಪ್ ನಂದಗಾಂವ, ಮಲಾಬಾದ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ “ಬೀರಪ್ಪ ಹೂಗಾರೆ ” ಚಿಕ್ಕೋಡಿ ಜಿಲ್ಲಾ ಬಿಜೆಪಿ ಸಂಚಾಲಕರಾದ “ಸಂಗಮೇಶ ಪಲ್ಲಕ್ಕಿ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಅತಿಥಿಯಾಗಿ  ಗ್ರಾಮ ಪಂಚಾಯತ್ ಮಲಾಬಾದ ಮಾಜಿ ಅಧ್ಯಕ್ಷರಾದ “ಧರೆಪ್ಪ ಕನಮಡಿ” ಬಿಜೆಪಿ ಮುಖಂಡರಾದ “ರಜಾಕ್ ದಸ್ತಗೀರಸಾಬ್ ಮುಲ್ಲಾ”  ಮಲ್ಲಪ್ಪ ಕಾಂಬಳೆ, ಸಂಗಪ್ಪ ಚೌಗಲಾ, ಕಾಕಾಸಾಬ ಚೌಗಲಾ ವಹಿಸಿದ್ದರು.

ನಂತರ ಈ ಮುಸ್ಸಂಜೆ ಸಮಾರಂಭದ ಮುಖ್ಯ ಉದ್ದೇಶವಾದ ಸನ್ಮಾನ ಕಾರ್ಯಕ್ರಮ ಬರದಿಂದ ಸಾಗಿತು.ಅಥಣಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ವಿಜೇತರಾದ “ಆಶಿಫ್ ತಾಂಬುಳಿ”  ಹೂಗಾರ್ ಪಟ್ಟಣ ಪಂಚಾಯತದಿಂದ ಚುನಾಯಿತಗೊಂಡ “ಹಾರುನ್ ಮುಲ್ಲಾ ಹಾಗೂ ಮಲಾಬಾದ ಪಂಚಾಯತ್ ಉಪಚುನಾವಣೆಯಲ್ಲಿ ಸದಸ್ಯರಾಗಿ ವಿಜೇತರಾದ ಶೀಮತಿ “ವರ್ಷಾ ಶಿವಾಜಿ ಪವಾರ್ ಬೆವನೂರ್” ಈ ಎಲ್ಲಾ ಸದಸ್ಯರನ್ನು ಶಾಲು, ಮಾಲೆ ಹಾಕಿ ಸನ್ಮಾನಿಸಲಾಯಿತು.

ನಂತರ ಸಭೆಯನ್ನು ಉದ್ದೇಸಿಸಿ ಮಾತನಾಡಿದ ಬಿಜೆಪಿ ಮುಖಂಡರು ಹಾಗೂ ಸುಪ್ರೀಮ್ ಪೋಲ್ಟ್ರಿ ಫಾರ್ಮ್ ಮಾಲೀಕರಾದ “ಮಹಮದ್ ಮುಲ್ಲಾ” ನಾವು ಸದಸ್ಯರನ್ನು ಗೆಲ್ಲಿಸೋದು ಹಾಗೂ ನಮ್ಮ ರಾಜಕೀಯ ಭವಿಷ್ಯ ಬದಲಾವಣೆಗಳು ನಮ್ಮ ಭಾಗದ ಜನಪ್ರಿಯ ಮುಖಂಡರಾದ ಮಾಜಿ ಉಪಮುಖ್ಯಮಂತ್ರಿಗಳಾದ  “ಲಕ್ಷಣ ಸವದಿ” ಇವರ ಮಾರ್ಗದರ್ಶದಲ್ಲಿ ನಾವು ಮುನ್ನಡೆ ಸಾದಿಸುತ್ತಿದ್ದೇವೆ. ಈ ಶ್ರೇಯಸ್ಸು ಲಕ್ಷಣ ಸವದಿ ಹಾಗೂ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ “ಶ್ರೀಮಂತ ಪಾಟೀಲ” ಇವರಿಗೆ ಸಲ್ಲುತ್ತದೆವೆಂದರು.

ಈ ಸಂದರ್ಭದಲ್ಲಿ ಮಲಾಬಾದ, ಬಾಳಿಗೇರಿ ಹಾಗೂ ಬೆವನೂರ್ ಗ್ರಾಮಸ್ಥರು ಉಪಸ್ಥಿತರಿದ್ದರು. ವಿನಾಯಕ ಸನದಿ ನಿರೂಪಿಸಿದರು- ರವಿ ಬನಸೋಡೆ ಸ್ವಾಗತಿಸಿದರು- ಮಂಜುನಾಥ ಸನದಿ ವಂದಿಸಿದರು.


Leave a Reply