Belagavi

ವಿಕೇಂಡ್ ಕರ್ಫ್ಯೂ ಮಧ್ಯೆ ಕಿತ್ತೂರಿನಲ್ಲಿ ದೇವಸ್ಥಾನಗಳ ಸರಣಿ ಕಳ್ಳತನ


ಬೆಳಗಾವಿ: ವಿಕೇಂಡ್ ಕರ್ಪ್ಯೂ ಮಧ್ಯೆ ಕಳ್ಳರ ಕೈಚಳಕ ನಡೆದಿದ್ದು, ದೇವಸ್ಥಾನದಲ್ಲಿದ್ದ ಚಿನ್ನ, ಬೆಳ್ಳಿ, ಹಣದ ಹುಂಡಿಯನ್ನೇ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಕಿತ್ತೂರು ತಾಲೂಕಿನ ಕಲಾರಕೊಪ್ಪ ಗ್ರಾಮದಲ್ಲಿ ನಡೆದಿದೆ.ಖದೀಮರು ಮನೆಗಳನ್ನು ಬಿಟ್ಟು ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿದ್ದಾರೆ.

ಕಲಾರಕೊಪ್ಪ ಗ್ರಾಮದ ಬಸವೇಶ್ವರ, ಲಕ್ಷ್ಮಿ-ಸರಸ್ವತಿ ದೇವಸ್ಥಾನದಲ್ಲಿ ದರೋಡೆ ಮಾಡಿದ್ದಾರೆ. ಬಸವೇಶ್ವರ ದೇಗುಲದ 10 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಹಾಗೂ ಹುಂಡಿ ಸಮೇತ ಪರಾರಿಯಾಗಿದ್ದಾರೆ.

ಹುಂಡಿಯಲ್ಲಿನ ಕಾಣಿಕೆ ಹಣ ಒಯ್ಯದೇ ಹುಂಡಿಯನ್ನೇ ಹೊತ್ತೊಯ್ದಿದ್ದಾರೆ. ಹುಂಡಿಯಲ್ಲಿ ಅಂದಾಜು 2 ಲಕ್ಷ ರೂ. ಕಾಣಿಕೆ ಹಣ ಇದ್ದ ಬಗ್ಗೆ ಗ್ರಾಮಸ್ಥರ ಅಂದಾಜು ಹಾಕಿದ್ದಾರೆ. ಬಳಿಕ ಅದೇ ಗ್ರಾಮದ ಲಕ್ಷ್ಮಿ-ಸರಸ್ವತಿ ದೇವಸ್ಥಾನ ಕೀಲಿ ಮುರಿದು ಕಳ್ಳತನ ಮಾಡಿದ್ದಾರೆ.

ಲಕ್ಷ್ಮಿ-ಸರಸ್ವತಿ ದೇವಸ್ಥಾನದಲ್ಲಿದ್ದ ಚಿನ್ನ, ಬೆಳ್ಳಿಯ ವಸ್ತುಗಳು ಕಳ್ಳತನವಾಗಿದೆ. ದೇವಸ್ಥಾನಗಳ ಕಳ್ಳತನದಿಂದ ಕಲಾರಕೊಪ್ಪದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಖದೀಮರ ಪತ್ತೆಗಾಗಿ ಬಲೆ ಬೀಸಿದ್ದಾರೆ.


Leave a Reply