Koppal

ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ವದ್ದು: ಶೈಲಜಾ ಹಿರೇಮಠ


ಗಂಗಾವತಿ: ಕಳೆದೆರಡು ವರ್ಷಗಳಿಂದ ಕೊರೋನಾ ಆರ್ಭಟಕ್ಕೆ ಇಡೀ ವಿಶ್ವವೇ ತತ್ತರಗೊಂಡಿದ್ದು, ಇಂತಹ ಸಂದರ್ಭದಲ್ಲಿ ಸಂಘ-ಸಂಸ್ಥೆಗಳ ಸಾಮಾಜಿಕ ಸೇವಾ ಕಾರ್ಯ ಮಹತ್ವದ್ದಾಗಿದೆ ಎಂದು ಸಂಜೋಗಿತಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೈಲಜಾ ಹಿರೇಮಠ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನನಿ ಫೌಂಡೇಷನ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೋನಾ ಮಹಾಮಾರಿ ಎನ್ನುವುದಕ್ಕಿಂತಲೂ ಅದು ನಮಗೆ ಹೇಗೆ ಬದುಕಬೇಕೆನ್ನುವ ಬಹುದೊಡ್ಡ ಪಾಠವನ್ನು ಕಲಿಸಿದೆ. ಮೊದಲ ಬಾರಿಗೆ ೩ ತಿಂಗಳ ಲಾಕ್‌ಡೌನ್ ಸಂದರ್ಭದಲ್ಲಿ ಜನತೆ ಹಲವಾರು ಸಂಕಷ್ಟಕ್ಕೀಡಾಗಿದ್ದಾರೆ. ಆ ಸಂದರ್ಭದಲ್ಲಿ ಸಂಘ-ಸAಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಸಾಮಾಜಿಕ ಸೇವೆ ಮಾಡಿದ್ದನ್ನು ಜನತೆ ಕಂಡಿದ್ದಾರೆ. ಈ ನಿಟ್ಟಿನಲ್ಲಿ ವಡ್ಡರಹಟ್ಟಿ ಗ್ರಾಮದಲ್ಲಿ ಮಧ್ಯಮ ವರ್ಗದ ಮಹಿಳೆ ಜೊತೆಗೆ ಹಲವಾರು ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ ನಾಗವೇಣಿ ಬಡಿಗೇರ್ ಅವರು ಇಂದು ಜನನಿ ಫೌಂಡೇಷನ್ ಸ್ಥಾಪನೆ ಮಾಡಿದ್ದು ಸಂತಸ ತಂದಿದೆ. ಮಹಿಳೆಯರ ಸಬಲೀಕರಣ, ಮಕ್ಕಳ ಶಿಕ್ಷಣ, ಆರೋಗ್ಯ, ಸಾಮಾಜಿಕ ಜಾಗೃತಿಗೆ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾ ಬಂದಿದ್ದಾರೆ. ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರೂ ಕೂಡ ಪ್ರಸ್ತುತ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನ ಜನನಿ ಪೌಂಢೇಷನ್‌ಗೆ ನೀಡುವಂತೆ ಮನವಿ ಮಾಡಿದರು.
ನಂತರ ಗ್ರಾಮ ಪಂಚಾಯತಿ ಅಧ್ಯಕ್ಷ ಭರತ್‌ಕುಮಾರ, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಅಧ್ಯಕ್ಷ ವಿನಾಯಕ ಚೊಳಚಗುಡ್ಡ, ಕುಷ್ಟಗಿಯ ವೈದ್ಯರಾದ ಲತಾ ಪಾಟೀಲ್, ಫೌಂಡೇಷನ್ ಅಧ್ಯಕ್ಷೆ ನಾಗವೇಣಿ ಬಡಿಗೇರ್, ಶಶಿಕಲಾ ಮಾತನಾಡಿದರು.
ಪೌಂಢೇಷನ್ ಕಾರ್ಯದರ್ಶಿ ಸೋಮಯ್ಯ, ನಿರ್ದೇಶಕರಾದ ಶ್ರೀಮತಿ ಅಭಿಲಾಷ, ಬಿ.ಆರ್. ಬಡಿಗೇರ್, ಶಾಂತಗೌಡ, ಸಿದ್ಧಲಿಂಗಪ್ಪ, ಗ್ರಾಮದ ಮುಖಂಡರಾದ ಚಿನ್ನಪ್ಪ, ನಾಗಪ್ಪ, ಶಿಕ್ಷಕರಾದ ಬಸವಲಿಂಗಯ್ಯಸ್ವಾಮಿ ಸೇರಿದಂತೆ ಅನೇಕರಿದ್ದರು.


Leave a Reply