Koppal

ಚಂಪಾ ಅವರ ನಿಧನಕ್ಕೆ ಹನುಮಂತಪ್ಪ ಅಂಡಗಿ,ಅವರಿಂದ ನೆನಪಿನ ನುಡಿ ಶ್ರದ್ಧಾಂಜಲಿ


ಕೊಪ್ಪಳ : ಕನ್ನಡದ ಹೆಸರಾಂತ ಸಮಾಜವಾದಿ ಲೇಖಕರು, ಚಿಂತಕರು, ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸಂಪಾದಕರು, ಪ್ರೊ.ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಉಪನ್ಯಾಸಕರು ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ, ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಂಪಾ ಅವರ ಜೊತೆ ಕಳೆದ ಒಡನಾಟದ ಕ್ಷಣಗಳನ್ನು ಮೇಲಕು ಹಾಕಿದರು. ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ೨೦೦೪ ಮಾರ್ಚ್ ೧೩ ; ೧೪ ರಂದು ಕೊಪ್ಪಳದ ಸಾಹಿತ್ಶ ಭವನದಲ್ಲಿ ಹಮ್ಮಿಕೊಂಡ ರಾಜ್ಶಮಟ್ಟದ ೧೪ ನೇ ಚುಟುಕು ಸಾಹಿತ್ಶ ಸಮ್ಮೇಳನದ ಅಧ್ಶಕ್ಷರನ್ನಾಗಿ ಪ್ರೋ.ಚಂಪಾ ಅವರನ್ನು ಆಯ್ಕೆಮಾಡಿದ್ದೆವು.ಪ್ರೋ.ಹಂಪಾ ನಾಗರಾಜಯ್ಶನವರು ಉದ್ಘಾಟಕರಾಗಿ ಆಗಮಿಸಿದ್ದರು.ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಶ ಪರಿಷತ್ತಿನ ಅಧ್ಶಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಕಾರ್ಯಕ್ರಮದ ಅಧ್ಶಕ್ಷತೆ ವಹಿಸಿದ್ದರು.ಕೇಂದ್ರ ಚುಟುಕು ಸಾಹಿತ್ಶ ಪರಿಷತ್ತಿನ ಪ್ರಧಾನ ಸಂಚಾಲಕರಾದ ಡಾ.ಎಂ.ಜಿ.ಆರ್.ಅರಸ್ ; ಶಾಸಕರಾಗಿದ್ದ ಶ್ರೀಯುತ ಸಂಗಣ್ಣ ಕರಡಿ ; ಜಿ.ಪಂ.ಉಪಾಧ್ಶಕ್ಷರಾಗಿದ್ದ ಶ್ರೀಯುತ ಯಮನಪ್ಪ ಕಬ್ಬೇರ ; ಗುಲಬರ್ಗಾ ವಿ.ವಿ.ಸಿಂಡಿಕೇಟ್ ಸದಸ್ಶರಾಗಿದ್ದ ಶ್ರೀಮತಿ ಇಂದಿರಾ ಭಾವಿಕಟ್ಟಿ ಮುಂತಾದವರಿದ್ದರು. ಎಂದು ಚಂಪಾ ಅವರ ನೆನೆದು ನಿಧನಕ್ಕೆ ಹನುಮಂತಪ್ಪ ಅಂಡಗಿ,ಅವರು ನುಡಿ ನಮನ ಸಲ್ಲಿಸಿದರು.

ವರದಿ-ಸಿದ್ದು ಹಿರೇಮಠ


Leave a Reply