Belagavi

ಪ್ರಧಾನಿಗೆ ಪಂಜಾಬ್ ನಲ್ಲಿ ಭದ್ರತಾ ವೈಪಲ್ಯ ಖಂಡಿಸಿ ಬಿಜಿಪಿ ಮೌನ ಪ್ರತಿಭಟನೆ


ಬೆಳಗಾವಿ : ಮೊನ್ನೆ ನಡೆದ ದೇಶದ ಹೆಮ್ಮೆಯ ಪ್ರಧಾನಿ ಪೂಜನೀಯ ನರೇಂದ್ರ ಮೋದಿಯವರಿಗೆ ನೀಡಿದಂತ ಭದ್ರತಾ ವೈಫಲ್ಯವನ್ನು ಖಂಡಿಸಿ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ, ಬಿಜೆಪಿ ಎಸ್.ಸಿ. ಮೋರ್ಚಾ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ಪಮ್ಮಾರ ರವರ ಅಧ್ಯಕ್ಷತೆಯಲ್ಲಿ ಇಂದು ನಗರದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉದ್ಯಾನದಲ್ಲಿ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ಎಸ್. ಸಿ. ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ಜಿತೇಂದ್ರ ಮಾದಾರ್, ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ರಾವ್ ಬಹುದ್ದೂರ್ ಕದಂ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ಪೃಥ್ವಿಸಿಂಗ, ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ ರಾಠೋಡ, ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ, ಮಹೇಶ್ ವಡಗಾವಿ, ಭೀಮರಾವ್ ಪಾತ್ರೋಟ,ಎಲ್ಲೇಶ ಕೋಲಕಾರ್, ದಕ್ಷಿಣ ಮಂಡಲದ ಎಸ್.ಸಿ. ಮೋರ್ಚಾದ ಅಧ್ಯಕ್ಷರಾದ ಪ್ರವೀಣ್ ಅಲಕುಂಟೆ, ರಮೇಶ್ ಮಂಜಲಕರ ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

 


Leave a Reply