ಬಾಲಕ ಮನ್‌ಕುಮಾರ ಪತ್ತೆ

0

ಬೆಳಗಾವಿ, ಜ.೮: ಬಾಲಕ ಮನ್‌ಕುಮಾರ (೫ ವರ್ಷ) ಬೆಳಗಾವಿಯ ದರ್ಬಾರ ಗಲ್ಲಿಯಲ್ಲಿ ಗುರುವಾರ ಡಿಸೆಂಬರ್ ೧೭ರಂದು ಮುಂಜಾನೆ ೧೧ ಗÀಂಟೆಗೆ ಬಾಲಕ ಒಬ್ಬಂಟಿಯಾಗಿ ನಿಂತಿರುವುದನ್ನು ನೋಡಿದ ಸಾರ್ವಜನಿಕರು ಮಾರ್ಕೆಟ್ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದರು.
ಪೋಲಿಸ್ ಸಿಬ್ಬಂದಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಬಾಲಕನನ್ನು ಒಪ್ಪಿಸಿ, ನಂತರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದಾಗ ಮಗುವನ್ನು ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಕೇಂದ್ರ (ಅಮೂಲ್ಯ-ಪಿ) ನ್ಯಾಯ ಮಾರ್ಗ ಎಸ್.ಪಿ. ಆಪೀಸ್ ಹತ್ತಿರ ಸುಭಾಷ ನಗರಕ್ಕೆ ರಕ್ಷಣೆ ಮತ್ತು ಪೋಷಣೆಗೆ ಕಳುಹಿಸಿರುತ್ತಾರೆ.
ಈಗ ಸದ್ಯ ಮಗು ದತ್ತು ಕೇಂದ್ರದಲ್ಲಿದೆ. ಪಾಲಕರು ಇದ್ದಲ್ಲಿ ಈ ಮೇಲಿನ ಸಂಸ್ಥೆಗೆ ಬಂದು ಭೇಟಿಯಾಗಿ ತಮ್ಮ ಗುರುತು ಪತ್ತೆ ಹೇಳಿ ತೆಗೆದುಕೊಂಡು ಹೋಗಲು ಈ ದೂರವಾಣಿ ಸಂಖ್ಯೆ: ೯೬೦೬೮೬೯೧೨೨,೬೩೬೦೭೧೯೫೫೪ ಗೆ ಸಂಪರ್ಕಿಸಿ ಎಂದು ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಕೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

- Advertisement -

Leave A Reply

Your email address will not be published.