Belagavi

ಜ.೧೪ ರಂದು ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ


ಬೆಳಗಾವಿ,ಜ.೧೧: ಬೆಳಗಾವಿಯ ಹೆಸ್ಕಾಂ ನೆಹರೂ ನಗರ ಕಚೇರಿಯಲ್ಲಿ ಶುಕ್ರವಾರ ಜ.೧೪ ಬೆಳಿಗ್ಗೆ ೧.೩೦ ಗಂಟೆಗೆ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ ನಡೆಯಲಿದೆ.
ಬೆಳಗಾವಿಯ ಕಾರ್ಯ ಮತ್ತು ಪಾಲನೆ ವೃತ್ತ ಕಚೇರಿ ಅಧೀಕ್ಷಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿದ್ದು, ಸದರಿ ಸಭೆಯಲ್ಲಿ ಗ್ರಾಹಕರು ಭಾಗವಹಿಸಿ ತಮ್ಮ ಸಮಸ್ಯೆ, ಕುಂದು ಕೊರತೆಗಳ ಪರಿಹರಿಸಿಕೊಳ್ಳಬೇಕು ಎಂದು ಬೆಳಗಾವಿ ನೆಹರೂ ನಗರ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply