Belagavi

ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕಲಾಗಂಗಾಧರ ಸಾಂಸ್ಕೃತಿಕ ವೇದಿಕೆಯಿಂದ ಸಂತಾಪ


ಬೆಳಗಾವಿ ೧೨- ಇತ್ತೀಚೆಗೆ ನಮ್ಮನ್ನಗಲಿದ ಕಿತ್ತೂರುನಾಡಿನ ಖ್ಯಾತ ಜಾನಪದ ಹಾಡುಗಾರ ಬಸವಲಿಂಗಯ್ಯ ಹಿರೇಮಠ ಹಾಗೂ ಖ್ಯಾತ ಕವಿ, ಕನ್ನಡ ಹೋರಾಟಗಾರ ಡಾ. ಚಂದ್ರಶೇಖರ ಪಾಟೀಲ ಇವರಿಗೆ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕಲಾ ಗಂಗಾಧರ ಸಾಂಸ್ಕೃತಿಕ ವೇದಿಕೆ ಗೌರವಪೂರ್ವಕ ಅಂತಿಮ ನಮನಗಳನ್ನು ಸಲ್ಲಿಸುತ್ತದೆ.
ನಾಡಿನ ಜಾನಪದ ಹಾಡುಗಳನ್ನು ತಮ್ಮ ಕಂಚಿನ ಕಂಠದಿAದ ಜೀವಂತವಾಗಿರಿಸಿದ ಬಸವಲಿಂಗಯ್ಯ ಹಿರೇಮಠರಿಂದ ಜಾನಪದ ಸಾಹಿತ್ಯ ಮತ್ತು ಕಲಾಕ್ಷೇತ್ರಗಳಿಗೆ ಅಪೂರ್ವ ಸೇವೆ ಸಂದಿದೆ. ಹಾಗೆಯೇ ಕವಿ ನಾಟಕಕಾರರಾಗಿ ಮತ್ತು ಸಂಕ್ರಮಣ ಪತ್ರಿಕೆ ಮೂಲಕ ನಾಡಿನ ಒಂದು ಯುವಕವಿ ಪೀಳಿಗೆಯನ್ನೇ ಬೆಳೆಸಿದ ಚಂಪಾ ಅವರು ಗೋಕಾಕ ಚಳವಳಿ ಸಂದರ್ಭದಲ್ಲಿ ಮಾಡಿದ ಹೋರಾಟ ಮತ್ತು ಕಸಾಪ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಚಿರಸ್ಮರಣೀಯ. ಈ ಇಬ್ಬರು ಚೈತನ್ಯಶೀಲ ವ್ಯಕ್ತಿಗಳನ್ನು ಕಳೆದುಕೊಂಡಿರುವದು ಕರ್ನಾಟಕಕ್ಕೆ ಆದ ಬಲು ದೊಡ್ಡ ನಷ್ಟ. ಅವರ ಆತ್ಮಕ್ಜೆ ಚಿರಶಾಂತಿಯಿರಲಿ ಎಂದು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕಲಾ ಗಂಗಾಧರ ಸಾಂಸ್ಕೃತಿಕ ವೇದಿಕೆ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.
ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಗೌರವ ಕರ‍್ಯದರ್ಶಿ ಆರ್. ಬಿ. ಕಟ್ಟಿ ಮತ್ತು ಕಲಾ ಗಂಗಾಧರ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಮಲ್ಲಿಕಾರ್ಜುನ ಮಠದ, ಉಪಾಧ್ಯಕ್ಷ ಪ್ರೇಮನಾಥ ನಿರ್ಗಟ್ಟಿ, ಕಾರ್ಯದರ್ಶಿ ಗುಂಡೇನಟ್ಟಿ ಮಧುಕರ, ಸದಸ್ಯರಾದ ಸುನಿತಾ ಪಾಟೀಲ, ಯಾದವೇಂದ್ರ ಪೂಜಾರಿ, ಜ್ಯೋತಿಬಾ ನಾಯ್ಕ ಮೊದಲಾದವರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.


Leave a Reply