Belagavi

ಶಾಲಾ ಮಕ್ಕಳ ಲಷಿಕಾ ಅಭಿಯಾನಕ್ಕೆ ಚಾಲನೆ


ಅಥಣಿ: ಸರ್ಕಾರಿ ಪ್ರೌಢ ಶಾಲೆ ತಾಂವಶಿ ಲಷಿಕಾ ಅಭಿಯಾನಕ್ಕೆ ಇವತ್ತು ಚಾಲನೆ ನೀಡಲಾಯಿತು.

ಪ್ರಾಥಮಿಕ ಅರೋಗ್ಯ ಕೇಂದ್ರ ಶಿವನೂರ ವತಿಯಿಂದ ಏರ್ಪಡಿಸಿದ 15 ರಿಂದ 18 ವರ್ಷದ ಲಷಿಕಾ ಅಭಿಯಾನ ಅಡಿಯಲ್ಲಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಲಷಿಕೆ ನೀಡುವ ಕಾರ್ಯಕ್ರಮ ನೆರವೇರಿತು.

ತಾಂವಶಿ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾಜಿ ಸೈನಿಕ “ಶ್ರೀ ಮಲಕಪ್ಪ ಬಿಳ್ಳೂರ ಹಾಗೂ ಉಪಾಧ್ಯಕ್ಷರಾದ “ಅಶೋಕ್ ಚೌಗಲಾ” ಚಾಲನೆ ನೀಡಿದರು.

ಪ್ರಾಥಮೀಕ ಅರೋಗ್ಯ ಕೇಂದ್ರ ಶಿವನೂರ ಸಹಾಯಕ ಅರೋಗ್ಯ ನೀರಕ್ಷಣಾ ಅಧಿಕಾರಿಗಳಾದ “ಪವನ್ ಅರಭಳ್ಳಿ” ಮಾತನಾಡಿ 15- ರಿಂದ 18 ವರ್ಷದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಲಷಿಕೆ ಪಡೆದುಕೊಳ್ಳಬೇಕು, ನೀವು ನಿಮ್ಮ ವಿದ್ಯಾಬ್ಯಾಸದ ಜೋತೆಗೆ ಅರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ ಸರಿಯಾದ ಸಮಯಕ್ಕೆ ಊಟ ನಿದ್ದೆ ಹಾಗೂ ಅರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಕಂಡುಬ0ದರೆ ಕುಡಲೆ ಚಿಕಿತ್ಸೆ ಪಡೆದುಕೊಳ್ಳಿ, ಮೊದಲನೆಯ ಲಷಿಕೆ ಪಡೆದ ನಂತರ ಮಾತ್ರೆ ಸೇವಿಸಿ ಮನೆಯಲ್ಲಿ ವಿಶ್ರಾಂತಿ ಮಾಡಿ ಹಾಗೂ ಆರೋಗ್ಯದಲ್ಲಿ ಏನಾದ್ರು ವ್ಯತ್ಯಾಸ ಕಂಡುಬಂದರೆ ಆಶಾ ರನ್ನು ಸಂಪರ್ಕಿಸಿ ನಾವು ಚಿಕಿಸ್ತೆ ನೀಡುತ್ತೇವೆಂದು ತಿಳುಸಿದರು.

ಈ ಸಂದರ್ಭದಲ್ಲಿ ಪ್ರಾಡ ಶಾಲೆ ಮುಖ್ಯ ಶಿಕ್ಷಕರಾದ “ಎಸ್ ಎಸ್ ನಾಯಕ” ಅರೋಗ್ಯ ಸಿಬ್ಬಂದಿಯಾದ “ವಿಕ್ರಮ ಕಾಂಬಳೆ ” ಆಶಾ ಕಾರ್ಯಕರ್ತಿಯರಾದ “ಶ್ರೀಮತಿ ರೇಖಾ ಕಾಂಬಳೆ, ಮಾನಂದಾ ಮಾಲಗಾವಿ” ಪ್ರೌಢಶಾಲೆಯ ಶಿಕ್ಷಕ, ಶಿಕ್ಷಕಿ ವೃಂದದವರು ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


Leave a Reply