Belagavi

ವಿವೇಕಾನಂದರ ಚಿಂತನೆ, ಸಂದೇಶ ಎಲ್ಲರಿಗೂ ದಾರಿ ದೀಪ: ಯುವ ನಾಯಕ ರಾಹುಲ್‌ ಜಾರಕಿಹೊಳಿ


ಗೋಕಾಕ: ವಿಶ್ವವನ್ನೇ ಬೆರಗುಗೊಳಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದ. ಇವರು ದೇಶದ ಯುವಕರಿಗೆ ಸ್ಫೂರ್ತಿಯಾದವರು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ನಗರದ ಹಿಲ್ಲ್‌ ಗಾರ್ಡನ್‌ ಕಚೇರಿಯಲ್ಲಿಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರೊಬ್ಬರು ಯುಗಪುರುಷ. ಇವರ ತತ್ವ ಆದರ್ಶ, ಅದ್ಭುತ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಇವರು ಮಾಡಿದ್ದ ಭಾಷಣ ಇಂದಿಗೂ ಪ್ರಸಿದ್ಧ. ಇದೊಂದು ಅತ್ಯಂತ ಪರಿಣಾಮಕಾರಿ ಭಾಷಣ. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಎಲ್ಲರಿಗೂ ದಾರಿ ದೀಪ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವೇಕ್ ಜತ್ತಿ, ಅರವಿಂದ್ ಕಾರ್ಚ, ವಿಠ್ಠಲ ಪ್ರಸನವರ್, ವಿನೋದ ಡೊಂಗರೆ., ಪಾಂಟು ರಂಗಶುಭೆ, ಪ್ರಹ್ಲಾದ ನಾಡಿಗೇರ, ಕಲ್ಪನಾ ಜೋಶಿ ಸೇರಿದಂತೆ ಇತರರು ಇದ್ದರು.


Leave a Reply