Koppal

ಯುವಕರಿಗೆ-ಸ್ಪೂರ್ತಿ ವಿವೇಕಾನಂದರು:- ಸೋಮನಗೌಡ. ಎಚ್. ಮಾಲಿಪಾಟೀಲ್


ಲಿಂಗಸಗೂರು:- ಶ್ರೀ ಉಮಾಮಹೇಶ್ವರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 159ನೇ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯುತು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಮಾಮಹೇಶ್ವರಿ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಪ್ಪ .ಬಿ. ಚಿನ್ನಾಪೂರು* *ಅವರು ಸ್ವಾಮಿ ವಿವೇಕಾನಂದರ ಆದರ್ಶಯುತ ಬದುಕಿನ ಮೌಲ್ಯಗಳನ್ನ ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸೋಮನಗೌಡ. ಎಚ್. ಮಾಲಿಪಾಟೀಲ್ ಅವರು ವೀವೆಕಾನಂದರು ಭಾರತದ ಹೆಮ್ಮೆಯ ಪುತ್ರ, ವೀರಸನ್ಯಾಸಿ,ಯುವನೇತಾರ, ಅಧಮ್ಯಚೇತನ, ಭಾರತದ ಸಂಸ್ಕೃತಿ, ಪರಂಪರೆಯನ್ನ ಜಗಜ್ಜಾಹಿರ ಮಾಡಿದ ಭಾರತ ಸಂಸ್ಕೃತಿಯ ಪ್ರತೀಕವಾಗಿದ್ದರು.ವಿವೇಕಾನಂದರ ಜೀವನ ಚರಿತ್ರೆ ಹಾಗೂ ಭವಿಷ್ಯದ ಭವ್ಯ ಭಾರತದ ಬಗ್ಗೆ ವಿಶೇಷ ದೂರದೃಷ್ಟಿಕೋನವನ್ನ ಹೊಂದಿದ್ದರು. ಅವರಿಗಿದ್ದ ದೇಶಪ್ರೇಮ ನಮಗೆ ಅನುಕರಣೀಯ.
ಅವರ ನವೀನ ಆಲೋಚನೆ, ಆದರ್ಶಯುತವಾದ ವಿಚಾರಗಳು, ತತ್ವ-ಸಿದ್ಧಾಂತಗಳು ಭವಿಷ್ಯದ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿವೆ ಎಂದು ಹೇಳಿದರು.

ಕಾಲೇಜಿನ ವಿದ್ಯಾರ್ಥಿನಿ ಗಂಗಮ್ಮ ಅವರು ಮಾತನಾಡಿ ವಿವೇಕಾನಂದರು ಜೀವನದಲ್ಲಿ ಸಾಧನೆಮಾಡಿ ಬದುಕನ್ನ ಸಾರ್ಥಕವಾಗಿಸಿಕೊಳ್ಳ ಎಂದು ಹೇಳಿದರು.
ಇನ್ನೊರ್ವ ವಿದ್ಯಾರ್ಥಿ ಪವನಕುಮಾರ ಮಾತನಾಡಿ ಸ್ವಾಮಿ ವಿವೇಕಾನಂದರ ಭಾರತದ ಭಗವದ್ಗೀತೆ ಗ್ರಂಥದ ಮಹತ್ವನ್ನ ಸಾರಿ ವಿಶ್ವಮಟ್ಟಕ್ಕೆ ಕೊಂಡೊಯ್ಯದ ಹೆಮ್ಮೆಯ ಭಾರತದ ಪುತ್ರ ಎಂದು ಹೇಳಿದರು.

ಈ ಸಂಧರ್ಬದಲ್ಲಿ ಕಾಲೇಜಿನ ಪ್ರಾರ್ಚಾರ್ಯರಾದ ಮಲ್ಲಪ್ಪ.ಬಿ.ಚಿನ್ನಾಪೂರ,ಉಪನ್ಯಾಸಕರಾದ ಶ್ರೀ ಬಾಷಾಸಾಬ ಮುಜಾವರ, ಕಟ್ಟಯ್ಯ .ಬಿ.ಹೀರೆಮಠ, ದ್ಯಾಮಣ್ಣ ,ರಾಮನಗೌಡ ಹಾಗೂ ಉಪನ್ಯಾಸಕಿಯರಾದ ಕು.ಸುಮಾ ಪಾಟೀಲ್, ಶ್ರೀಮತಿ ಶಿವಗಂಗಾ ಎಂ.ಎಸ್. ಕು.ಮಹೇಶ್ವರಿ, ಅವರು ಉಪಸ್ಥಿತರಿದ್ದರು.

ವರದಿಗಾರರು: ವೀರಭದ್ರಯ್ಯ. ಬಿ.ಹಿರೇಮಠ
ಲಿಂಗಸಗೂರು


Leave a Reply