Koppal

ಯುವ ಶಕ್ತಿಯ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಸ್ವಾಮಿ ವಿವೇಕಾನಂದರು : ಮಂಜುನಾಥ ಹೊಸಕೇರಾ


ಗಂಗಾವತಿ 12 : ದೇಶದ ಸರ್ವತೋಮುಖ ಅಭಿವೃದ್ಧಿ ಯುವಕರ ಮೇಲೆ ಅವಲಂಬಿತವಾಗಿದ್ದು, ಯುವಶಕ್ತಿ ವಿದ್ಯುತ್ ಶಕ್ತಿಯಾಗಿ ಹೊರ ಹೊಮ್ಮಿದಾಗ ಮಾತ್ರ ದೇಶ ಸರ್ವಾಂಗೀಣ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಅಪಾರವಾದ ನಂಬಿಕೆಯನ್ನು ಹೊಂದಿದ್ದರು ಎಂದು
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಮಂಜುನಾಥ್ ಹೊಸಕೇರಾ ಹೇಳಿದರು.. ಅವರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಸಂನ್ಯಾಸಿ ವಿಶ್ವಮಾನವ ಶ್ರೀ ಸ್ವಾಮಿ ವಿವೇಕಾನಂದರ 159 ಜಯಂತೋತ್ಸವದ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು. ದೇಶದ ಯುವಜನತೆಯನ್ನು ಬಡಿದೆಬ್ಬಿಸುವ ಸ್ಫೂರ್ತಿಯ ಚಿಲುಮೆಯಾಗಿದ್ದ ಸ್ವಾಮಿವಿವೇಕಾನಂದರು, ವಿಶ್ವ ಸಮ್ಮೇಳನದಲ್ಲಿ ಅವರ ಆಡಿದ ಒಂದೊಂದು ಮಾತು ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತ್ತು. ಹೀಗಾಗಿ ಅವರ ತತ್ವ-ಸಿದ್ಧಾಂತ ಚಿಂತನೆ ಸಂದೇಶಗಳು ಸರ್ವಕಾಲಕ್ಕೂ ಸಮ್ಮತದಿಂದ ಕೂಡಿದೆ ಎಂದು ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸುದರ್ಶನ ವೈದ್ಯ, ನಾಗರಾಜ್ ವೈ,ಜಂಬುನಾಥಗೌಡ, ಶ್ರೀನಿವಾಸ ಪೂಜಾರಿ, ಬಸವರಾಜ್ ತೊಂಡಿಹಾಳ್, ವೀರಸಂಗಯ್ಯ, ಆಸಿಫ್ ಅಲಿ ಉಮೇಶ್ ಹೇಮಗುಡ್ಡ, ಪತ್ರಿಕೆ ವಿತರಕರಾದ ಶಿವಕುಮಾರ್, ಕಾಶಿರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ವರದಿ
(ಹನುಮೇಶ ಬಟಾರಿ ಗಂಗಾವತಿ)


Leave a Reply