Belagavi

ಬೆಳಗಾವಿ ಭಾರೀ ಚಳಿ : ಹತ್ತು ವರ್ಷಗಳ ನಂತರ ಕನಿಷ್ಠ ತಾಪಮಾನ


ಬೆಳಗಾವಿ: ಕುಂದಾನಗರಿಯಲ್ಲಿ ಮೈಕೊರೆಯುವ ಚಳಿ ಇನ್ನೂ ಕಡಿಮೆಯಾಗಿಲ್ಲ ಸತತ ಎರಡನೇ ದಿನವೂ ಗುರುವಾರ ಕನಿಷ್ಠ ತಾಪಮಾನ 8.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ತಾಪಮಾನ ಇಳಿಕೆ ಆಗುತ್ತಿದ್ದು ಗುರುವಾರ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಜನರು ಜನರು ಚಳಿಗೆ ಹೆದರಿದ್ದಾರೆ.

ಬುಧವಾರವಷ್ಟೇ 8.6 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದ ಕನಿಷ್ಠ ತಾಪಮಾನ, ಗುರುವಾರ 8.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇತ್ತು.

ಹತ್ತು ವರ್ಷಗಳ ನಂತರ ಇಷ್ಟೊಂದು ಪ್ರಮಾಣದ ಚಳಿ ಈಗ ಕಂಡುಬಂದಿದೆ.ಇನ್ನೂ ಮೂರ್ನಾಲ್ಕು ದಿನಗಳ ಕಾಲ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ


Leave a Reply